ವಿಳಾಸ & ಸಂಪರ್ಕ ಮಾಹಿತಿ

( ಸಲಹಾಕಾರ )

1. ಸಲಹಾಕಾರರ ಸಂಪರ್ಕ ಮಾಹಿತಿಃ-

ಶ್ರೀ. ಸುಬ್ಬಯ್ಯ ಭಟ್ ವರ್ಮುಡಿ

ವರ್ಮುಡಿ ಹೊಸಮನೆ,
ಅಂಚೆ ಪೆರ್ಲ, ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ, PIN – 671 552

ದೂ: (+91) 96 45 31 64 11 ; (+91) 94 49 90 36 52
ಮಿಂಚಂಚೆ: info@energyandvastuscience.com ; vsb.ssuthra@gmail.com

ಸಲಹಾಕಾರರ ಬಗ್ಗೆ:

a

ವಿಜ್ಞಾನ ಪದವೀಧರರಾದ ಶ್ರೀ ವರ್ಮುಡಿ ಸುಬ್ಬಯ್ಯ ಭಟ್ಟರು ಈ ಕ್ಷೇತ್ರದಲ್ಲಿ ಸನ್ 2000 ದಿಂದ ಅಧ್ಯಯನ ಮತ್ತು ಕೆಲಸ ಮಾಡುತ್ತಿದ್ದಾರೆ. ಆಧುನಿಕ ವಿಜ್ಞಾನ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಮುಕ್ತವಾದ ಮನಸ್ಥಿತಿಯನ್ನು ಹೊಂದಿರುವ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದಿದ್ದಾರೆ. ಶಾಸ್ತ್ರಗಳನ್ನು ಉಭಯ ದೃಷ್ಠಿಕೋನಗಳಿಂದ ಅರ್ಥವಿಸಲು ಈ ಹಿನ್ನೆಲೆಯು ಅವರಿಗೆ ಬಹುವಾಗಿ ಸಹಾಯಕವಾಯಿತು. ಪರಮಗುರುಗಳಂತೆಯೇ “ಶಾಸ್ತ್ರವಿಜ್ಞಾನಿ”ಗಳಾದ ಅವರ ಗುರುಗಳು ಈ ಕ್ಷೇತ್ರದಲ್ಲಿ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ; ಮಾಡುತ್ತಿದ್ದಾರೆ. ಶ್ರೀ ಸುಬ್ಬಯ್ಯ ಭಟ್ಟರು ಈ ಕ್ಷೇತ್ರವನ್ನು ಆಯ್ದುಕೊಳ್ಳಲಿಲ್ಲ; ಬದಲಾಗಿ, ಈ ಕ್ಷೇತ್ರವೇ ಅವರನ್ನು ಆಯ್ದುಕೊಂಡಿತು. ಅವರ ಮತ್ತವರ ಗುರುಗಳ ಮೂಲಕ ದೈವಾನುಗ್ರಹವು ಸಾಧಿಸಿದ ಯಶಸ್ಸು ಆಶ್ಚರ್ಯದಾಯಕವಾಗಿದೆ. ಇದಕ್ಕೆ ಅವರನ್ನು ಮಾಧ್ಯಮವಾಗಿ ಆರಿಸಿದ್ದಕ್ಕೆ ಆ ದೈವಾನುಗ್ರಹಕ್ಕೆ ಅವರು ಆಭಾರಿಗಳಾಗಿದ್ದಾರೆ.

“ಸರ್ವೇಜನಾಃ ಸುಖಿನೋ ಭವಂತು”. “ಆನಂದೋ ಬ್ರಹ್ಮ”.

2. ಶ್ರೀ ಸುಬ್ಬಯ್ಯ ಭಟ್ ರೊಂದಿಗೆ ಮೌಖಿಕ ಸಂಭಾಷಣೆಯ ಭಾಷೆಗಳು:-

ಆಂಗ್ಲ
ಕನ್ನಡ
ಮಲಯಾಳ
ಹಿಂದಿ
ತುಳು


3. ಶ್ರೀ ಸುಬ್ಬಯ್ಯ ಭಟ್ ರೊಂದಿಗೆ ಲಿಖಿತ ಸಂಪರ್ಕದ ಭಾಷೆಗಳು:-

ಆಂಗ್ಲ
ಕನ್ನಡ
ಹಿಂದಿ
ತುಳು

4. ನೀವು ಸಂಪೂರ್ಣ ವಾಸ್ತು ಮತ್ತು ಶಕ್ತಿ ಸಲಹೆಗಳನ್ನು ಹಾಗೂ ಪರಿಹಾರಗಳನ್ನು ಹೊಂದಬಹುದು.

1. ಸುದೂರದಿಂದ ಸಲಹೆ:

  • ವೈಯುಕ್ತಿಕ ಶಕ್ತಿಸಲಹೆ [ರತ್ನ ಸಲಹೆ ಇತ್ಯಾದಿ ಎಲ್ಲಾ]
  • ವಿವರಣಾತ್ಮಕ ಭಾರತೀಯ ಜಾತಕ [ಗ್ರಹಕುಂಡಲಿ ಮತ್ತು ಎಲ್ಲಾ ಆವಶ್ಯಕ ಗಣಿತಗಳು]; [ಮುದ್ರಿತ ಪ್ರತಿಯು ಅಂಚೆ ಅಥವಾ ಕೊರಿಯರ್ ಮೂಲಕ; ಗಣಕ ಪ್ರತಿಯು ಮಿಂಚಂಚೆಯ ಮೂಲಕ ಅಥವಾ ಸಿಡಿ ಯ(ಅಂಚೆ) ಮೂಲಕ; ಭಾಷೆಗಳು: ಆಂಗ್ಲ, ಮತ್ತು ಭಾರತೀಯ ಭಾಷೆಗಳು( )]
  • ಹುಟ್ಟಿದ ದಿನಾಂಕದಿಂದ ಮುಂದಿನ ಒಂದು ವರ್ಷದ ವೈಯುಕ್ತಿಕವಾದ ವಾರ್ಷಿಕ ಶಕ್ತಿ ಸಲಹೆ. [ಸೂಚನೆ: ಲಭ್ಯವಾದರೆ ಹುಟ್ಟಿದ ದಿನಾಂಕ (ರಾಷ್ಟ್ರಾಂತರೀಯ ಸ್ವೀಕೃತ ವ್ಯವಸ್ಥೆಯ ರೂಪದಲ್ಲಿ), ಹುಟ್ಟಿದ ಸಮಯ (ರಾಷ್ಟ್ರಾಂತರೀಯ ಸ್ವೀಕೃತ ವ್ಯವಸ್ಥೆಯ ರೂಪದಲ್ಲಿ), ಹುಟ್ಟಿದ ಸ್ಥಳ (ಹುಟ್ಟಿದ ಯಥಾರ್ಥ ಸ್ಥಳದ ನಿಖರವಾದ ಅಕ್ಷಾಂಶ ಮತ್ತು ರೇಖಾಂಶವನ್ನು ಗುರುತಿಸಲು ಸ್ಥಳದ ಹೆಸರು, ತಾಲೂಕು, ಜಿಲ್ಲೆ, ರಾಜ್ಯ, ದೇಶ ಇತ್ಯಾದಿ ಅಗತ್ಯ.)]

2. ಸ್ಥಳಕ್ಕೆ ಭೇಟಿನೀಡಿ ಸಲಹೆ:

  • ವಾಸ್ತು ಮತ್ತು ವಾಸ್ತ್ವೇತರ ಶಕ್ತಿ ಸಲಹೆ
  • ವೈಯುಕ್ತಿಕ ಶಕ್ತಿ ಸಲಹೆ
  • ಪರಿಹಾರಗಳು