ಸುಸ್ವಾಗತ

ಶಕ್ತಿ ಮತ್ತು ವಾಸ್ತು ವಿಜ್ಞಾನಗಳು

ಈ ಜಾಲತಾಣವು ಜೀವನದ ವಿವಿಧ ಮಗ್ಗುಲುಗಳ- ಪ್ರಧಾನವಾಗಿ ವಾಸ್ತುಶಾಸ್ತ್ರದ ಹಿಂದಿರುವ ವಿಶ್ವವಿಜ್ಞಾನದ ಮೂಲಭೂತ ವಿಚಾರಗಳನ್ನು ಮತ್ತು ಇನ್ನೂ ಹೆಚ್ಚನ್ನು ಹೊರಗೆಡಹುತ್ತದೆ. ಸಲಹಾಕಾರರಾದ ಶ್ರೀ ಸುಬ್ಬಯ್ಯ ಭಟ್, ವರ್ಮುಡಿ ಇವರು ಈ ತಿಳುವಳಿಕೆ, ವಿವಿಧ ರೀತಿಯ ವಿಶ್ಲೇಷಣೆ ಮತ್ತು ಪರಿಹಾರ ತಂತ್ರಗಳೊಂದಿಗೆ ತಮ್ಮ (ಗುರುಗಳಿಂದ ದೈವಿಕವಾಗಿ ಅನುಗ್ರಹೀತರಾದ ವ್ಯಕ್ತಿ ಮತ್ತು ಶ್ರೇಷ್ಠ ಯೋಗಿವಿಜ್ಞಾನಿಗಳಾದ ಗುರುವರ್ಯರೊಬ್ಬರ ಶಿಷ್ಯ) ಅನುಗೃಹೀತರಾಗಿದ್ದಾರೆ. ಇವುಗಳ ಮಿಂಚುನೋಟವು ಈ ಜಾಲತಾಣದಲ್ಲಿ ದಾಖಲಾಗಿದೆ..

ಸಲಹಾಕಾರರ ಬಗ್ಗೆ:

a

ವಿಜ್ಞಾನ ಪದವೀಧರರಾದ ಶ್ರೀ ವರ್ಮುಡಿ ಸುಬ್ಬಯ್ಯ ಭಟ್ಟರು ಈ ಕ್ಷೇತ್ರದಲ್ಲಿ ಸನ್ 2000 ದಿಂದ ಅಧ್ಯಯನ ಮತ್ತು ಕೆಲಸ ಮಾಡುತ್ತಿದ್ದಾರೆ. ಆಧುನಿಕ ವಿಜ್ಞಾನ ಮತ್ತು ಸಾಮಾಜಿಕ ಪರಿಸ್ಥಿತಿಗಳಿಗೆ ಮುಕ್ತವಾದ ಮನಸ್ಥಿತಿಯನ್ನು ಹೊಂದಿರುವ ಸಾಂಪ್ರದಾಯಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು ಬಂದಿದ್ದಾರೆ. ಶಾಸ್ತ್ರಗಳನ್ನು ಉಭಯ ದೃಷ್ಠಿಕೋನಗಳಿಂದ ಅರ್ಥವಿಸಲು ಈ ಹಿನ್ನೆಲೆಯು ಅವರಿಗೆ ಬಹುವಾಗಿ ಸಹಾಯಕವಾಯಿತು. ಪರಮಗುರುಗಳಂತೆಯೇ “ಶಾಸ್ತ್ರವಿಜ್ಞಾನಿ”ಗಳಾದ ಅವರ ಗುರುಗಳು ಈ ಕ್ಷೇತ್ರದಲ್ಲಿ ಅವರಿಗೆ ಮಾರ್ಗದರ್ಶನ ಮಾಡಿದ್ದಾರೆ; ಮಾಡುತ್ತಿದ್ದಾರೆ. ಶ್ರೀ ಸುಬ್ಬಯ್ಯ ಭಟ್ಟರು ಈ ಕ್ಷೇತ್ರವನ್ನು ಆಯ್ದುಕೊಳ್ಳಲಿಲ್ಲ; ಬದಲಾಗಿ, ಈ ಕ್ಷೇತ್ರವೇ ಅವರನ್ನು ಆಯ್ದುಕೊಂಡಿತು. ಅವರ ಮತ್ತವರ ಗುರುಗಳ ಮೂಲಕ ದೈವಾನುಗ್ರಹವು ಸಾಧಿಸಿದ ಯಶಸ್ಸು ಆಶ್ಚರ್ಯದಾಯಕವಾಗಿದೆ. ಇದಕ್ಕೆ ಅವರನ್ನು ಮಾಧ್ಯಮವಾಗಿ ಆರಿಸಿದ್ದಕ್ಕೆ ಆ ದೈವಾನುಗ್ರಹಕ್ಕೆ ಅವರು ಆಭಾರಿಗಳಾಗಿದ್ದಾರೆ. “ಸರ್ವೇಜನಾಃ ಸುಖಿನೋ ಭವಂತು”. “ಆನಂದೋ ಬ್ರಹ್ಮ”.

ಮುಂದೆ ಓದಿ..

ವಿಳಾಸ & ಸಂಪರ್ಕ ಮಾಹಿತಿ

ಶ್ರೀ ಸುಬ್ಬಯ್ಯ ಭಟ್ ವರ್ಮುಡಿ
ವರ್ಮುಡಿ ಹೊಸಮನೆ,
ಅಂಚೆ ಪೆರ್ಲ, ಮಂಜೇಶ್ವರ ತಾಲೂಕು
ಕಾಸರಗೋಡು ಜಿಲ್ಲೆ, PIN – 671 552

ದೂ:  +91 9645 316 411, 9449 903 652
ಮಿಂಚಂಚೆ: vsb.ssuthra@gmail.com, info@energyandvastuscience.com

ಪುಸ್ತಕಗಳು

(ಶ್ರೀ ಸುಬ್ಬಯ್ಯ ಭಟ್ ವರ್ಮುಡಿಯವರ)

vastu-shakti-vijnana
dowsing