ಶಕ್ತಿ ಮತ್ತು ವಾಸ್ತು ವಿಜ್ಞಾನಗಳು / FAQ’s

1. ‘ಶಕ್ತಿವಿಜ್ಞಾನ’ ಮತ್ತು ‘ವಾಸ್ತು ಶಾಸ್ತ್ರ’ (‘ವಾಸ್ತು ವಿಜ್ಞಾನ’) ಗಳೆಂದರೇನು? [ಶಕ್ತಿ ಮತ್ತು ವಾಸ್ತು ವಿಜ್ಞಾನಗಳು]

ಶಕ್ತಿ ಮತ್ತು ವಾಸ್ತು ವಿಜ್ಞಾನಗಳು ವಿವಿಧ ವಿಶ್ವಶಕ್ತಿ ಮತ್ತು ಸ್ಪಂದನ ರೂಪಗಳ ಬಗ್ಗೆ; ಮಾತ್ರವಲ್ಲದೇ ವಿಕಸನಾತ್ಮಕ ಮೂಲಧಾತುಗಳಾದ ಪಂಚಭೂತಗಳಿಂದ ನಿರ್ಮಾಣಗೊಂಡ ಮನುಜರಿಗೆ ಪಿಂಡಾಂಡ ಈ ಪಂಚಭೂತಾತ್ಮಕ ಪ್ರಪಂಚದಲ್ಲಿ ಬ್ರಹ್ಮಾಂಡ ಅನುಶ್ರುತಿಯಲ್ಲಿ ಬದುಕಲು ಸೂಕ್ತವಾದ ಭೂಮಿ ಮತ್ತು ನಿರ್ಮಾಣಗಳ ಬಗ್ಗೆ ಚರ್ಚಿಸುವ ವಿಜ್ಞಾನ ಮತ್ತು ತಂತ್ರಜ್ಞಾನಗಳಾಗಿವೆ. ಶಕ್ತಿ ವಿಜ್ಞಾನವು ಜೀವನ ಮತ್ತು ವಿಶ್ವಗಳ ಬಗೆಗಿನ ಭಾರತೀಯವಾದ ಏಕೀಕೃತ ಜ್ಞಾನವಾಗಿದೆ. ಈ ವಿಜ್ಞಾನದ ಒಂದು ಅನ್ವಯವು ವಾಸ್ತುಶಾಸ್ತ್ರವಾಗಿದೆ. ಇಲ್ಲಿ “ವಿಜ್ಞಾನ” ಎಂದರೆ ಆಧುನಿಕ ವಿಜ್ಞಾನ ಮಾತ್ರವಲ್ಲ, ವಿಜ್ಞಾನವೆಂದರೆ “ವಿಶೇಷ ಜ್ಞಾನ”ವೂ ಆಗಿದೆ.


2. ಶಕ್ತಿವಿಜ್ಞಾನ ಮತ್ತು ವಾಸ್ತುಶಾಸ್ತ್ರದ ಉಪಯೋಗವೇನು?

ಶಕ್ತಿ ಮತ್ತು ವಾಸ್ತು ವಿಜ್ಞಾನಗಳು ಪ್ರಕೃತಿಯೊಂದಿಗೆ  ಸಾಮರಸ್ಯದಲ್ಲಿ ಬದುಕಲು [ಇಂದಿನ ಪ್ರಪಂಚ ಮತ್ತು ಬದುಕಿನ ಸ್ಥಿತಿಯ ಇತಿಮಿತಿಯಲ್ಲಿ]; ಹಾಗೆ ವಿರೋಧವಾಗಿ ನಡೆಯದಿರಲು, ಮತ್ತು ಸಂತುಲಿತ ಪೂರ್ಣ ಬದುಕನ್ನು ಬದುಕಲು ಅವಶ್ಯವಾಗಿವೆ. ಇವುಗಳ ಅರಿವಿನ ದ್ವಾರಾ ವರ್ತಮಾನ ಶಕ್ತಿಸ್ಥಿತಿಯಿಂದ ಗರಿಷ್ಠ ಫಲ ಪಡೆಯಲು ಮತ್ತು ಋಣಾತ್ಮಕ ಪ್ರಭಾವಗಳನ್ನು ಕುಂಠಿತಗಿಳಿಸಲು ಸಾಧ್ಯವಿದೆ. ನಿತ್ಯಜೀವನದಲ್ಲಿ ಹಾಗೂ ಪೂರ್ಣ ಜೀವಿತಾವಧಿಯನ್ನು ಗಮನಕ್ಕೆ ತೆಗೆದುಕೊಂಡಾಗಲೂ ಇವು ಅತ್ಯಂತ ಫಲದಾಯಕವಾಗಿವೆ. ನಾವು ನಿತ್ಯಜೀವನವನ್ನು ಪ್ರಜ್ಞಾಪೂರ್ವಕವಾಗಿ ಬದುಕುವಾಗ ಮತ್ತು ಪೂರ್ಣ ಜೀವಿತಾವಧಿಗೆ ಒಂದು ಯೋಜನೆಯನ್ನು ಹೊಂದಿರುವಾಗ ಇವು ಅವಶ್ಯಕ ಮತ್ತು ನಿರ್ಣಾಯಕವಾಗಿರುವ ಪ್ರಾಯೋಗಿಕ ತಿಳುವಳಿಕೆಗಳಾಗಿವೆ.


3. ವಾಸ್ತು ಎಂದರೇನು?

“ವಸತಿ ಇತಿ ವಾಸ್ತುಃ” – ವಸತಿ ಯಿಂದಾಗಿ/ಗಾಗಿ ವಾಸ್ತು. “ವಾಸ್ತುಶಾಸ್ತ್ರ”ವು ಈ ಪ್ರಕೃತಿಯಲ್ಲಿ ವಾಸಿಸಲು ಬೇಕಾದ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಚರ್ಚಿಸುವ ಜ್ಞಾನರಾಶಿಯಾಗಿದೆ. ಈ ಜ್ಞಾನಧಾರೆಗೆ ಭಾರತವು ಮೂಲವಾಗಿದೆ.


4. ಪಥ ವಿಚಲಿತ ಸಾಂಪ್ರದಾಯಿಕ ಗ್ರಂಥಗಳು; ಮೂಲ ವಿಜ್ಞಾನ, ಮತ್ತುಆಧುನಿಕ ಅನ್ವಯ.

ವಾಸ್ತುಶಾಸ್ತ್ರವು ಬಹು ಪದರಗಳಾಗಿ ಹಲವು ದಿಕ್ಕುಗಳಲ್ಲಿ ಅಭಿವೃದ್ಧಿಹೊಂದಿದೆ. ಆದರೆ ನಾನಾರೀತಿಯ ಸಾಂಪ್ರದಾಯಿಕ ಗ್ರಂಥಗಳು ವ್ಯತ್ಯಸ್ತವಾಗಿ ಧ್ವನಿಸುತ್ತಿವೆ. ಇದಕ್ಕೆ ಕಾರಣವು ಅವುಗಳು ಬೆಳೆದ ವಿಭಿನ್ನ ಕಾಲದೇಶಗಳ ಆವಶ್ಯಕತೆ ಮತ್ತು ಇತಿಮಿತಿಗಳಾಗಿವೆ. ಮೂಲಭೂತವಾಗಿ ಎಲ್ಲಾ ಶಾಸ್ತ್ರಗಳ ದ್ರಷ್ಟಾರರು ಋಷಿಗಳು ಕಾಲಾನಂತರ ಅವುಗಳನ್ನು ವೃದ್ಧಿಸಿದವರು ಪಂಡಿತರು. ಬಹುಶಃ ಬಹ್ವಂಶ ಪಂಡಿತರುಗಳಿಗೆ ಒಳಅರಿವು ಮತ್ತು ಆನುಭಾವಿಕ ಆಳಗಳು ಇದ್ದಿರಲಾರವು. ನಿರ್ದಿಷ್ಟ ಹಂತದವರೆಗೆ ವಾಸ್ತುಶಾಸ್ತ್ರದ ವೃದ್ಧಿಯು ಫಲದಾಯಿಯಾಗಿದ್ದಿರಬಹುದು. ಆದರೆ ಕಾಲಾನಂತರ ಅಭಿವೃದ್ಧಿಯ ಮತ್ತು ಹೊಂದಿಸುವ/ರೂಪಾಂತರಿಸುವ ಹೆಸರಲ್ಲಿ ವಾಸ್ತುಶಾಸ್ತ್ರವು ಈ ಘಟ್ಟದಲ್ಲಿ ಇಳಿಜಾರಿತು. [ಹಲವು ಶಾಸ್ತ್ರಗಳು ಇದೇ ರೋಗದಿಂದ ಬಾಧಿತವಾಗಿವೆ] ವಾಸ್ತುಶಾಸ್ತ್ರವು ತನ್ನ ಹಿಂದಿದ್ದ ಶುದ್ಧ ವಿಜ್ಞಾನದಿಂದ ಪಥವಿಚಲಿತವಾದುದು ಇವೇ ಮಜಲುಗಳಲ್ಲಿ. ಮತ್ತು, ಈ ಘಟ್ಟಗಳಲ್ಲೇ ವಾಸ್ತುಶಾಸ್ತ್ರವು ಕಾಲ ದೇಶ ಮತ್ತು ಜನರ ಆವಶ್ಯಕತೆಗಳಿಗೆ ಹೊಂದಿಕೊಳ್ಳಲಾರದಾಯಿತು. ಬಗೆಬಗೆಯಾದ ವಾಸ್ತುಶಾಸ್ತ್ರ ಪಂಥ/ಗ್ರಂಥಗಳ ವರ್ಗ/ಪಂಗಡ, ದೇಶ ಕಾಲ ಆಶ್ರಯೀ ಸ್ವರೂಪವು ಸಾಮಾನ್ಯವಾಗಿ ಪಶ್ಚಾತ್ ವಿದ್ವಾಂಸರುಗಳಿಂದ ಪರಿಗಣಿತವಾಗಲಿಲ್ಲ.

ಈ ರೀತಿ ಹೇಳಿದಾಗ ನಾವು ಸಾಂಪ್ರದಾಯಿಕ ವಾಸ್ತುಶಾಸ್ತ್ರವನ್ನು ಅನುಸರಿಸುತ್ತಿಲ್ಲವೆಂದು ಕೆಲವರು ಭಾವಿಸಬಹುದು. ಆದರೆ ವಸ್ತುಸ್ಥಿತಿಯು ಏನೆಂದರೆ ನಾವು ಅನುಸರಿಸುತ್ತಿರುವ ಮತ್ತು ಪ್ರತಿಪಾದಿಸುತ್ತಿರುವ ಶಾಸ್ತ್ರವು ಋಷಿಗಳ ಜ್ಞಾನದ ತಿರುಳಿನಲ್ಲಿ ಬಲವಾಗಿ ಬೇರೂರಿದೆ.

ವಾಸ್ತುಶಾಸ್ತ್ರದ ಹಿಂದಿರುವ ಮೂಲವಿಜ್ಞಾನವನ್ನು ಅರ್ಥವಿಸಿಕೊಳ್ಳಲು ಅದರ ಆಳದ ಬೇರಿನೆಡೆಗೆ ಸಾಗುವುದು ಅತ್ಯವಶ್ಯವಾಗಿದೆ. ಆನಂತರ ಆವಶ್ಯಕತೆಗಳಿಗನುಸಾರವಾಗಿ ಅದನ್ನು ನಾವು ಅಭಿವೃದ್ಧಿಗೊಳಿಸಬೇಕು. ಸ್ಥಳೀಯ ಭೌಗೋಳಿಕ ಸ್ಥಿತಿ ಮತ್ತು ಅಕ್ಷಾಂಶೀಯ ಸ್ಥಾನಗಳನ್ನು ಆಶ್ರಯಿಸಿ ವಾಸ್ತುವಿನ ವಿಜ್ಞಾನದ ಅನ್ವಯಿಸುವಿಕೆಯು ವ್ಯತ್ಯಸ್ತಗೊಳ್ಳುತ್ತದೆ; ವಿಜ್ಞಾನವು ಸ್ಥಿರವಾದುದಾದರೂ.

 ಜೀವನದ ವಿವಿಧ ಮಗ್ಗುಲು ಮತ್ತು ಆಯಾಮಗಳನ್ನು ಆವರಿಸುವ ಹೆಚ್ಚಿನ ಎಲ್ಲಾ ಶಾಸ್ತ್ರಗಳಲ್ಲೂ ತುಲ್ಯವಾದ ಅವಸ್ಥೆಗಳನ್ನು ಗಮನಿಸಬಹುದು.


5. ವಾಸ್ತು ಮತ್ತು ಶಕ್ತಿಯ ಗುರಿ.

ಯಾವುದೇ ರೀತಿಯ ಭೌತಿಕ ವಾಸ್ತು ಸ್ಥಿತಿಯಲ್ಲೂ ತಪ್ಪುಗಳು ಇಲ್ಲ. ಪ್ರಪ್ರಥಮ ಮತ್ತು ಅಗ್ರಗಣ್ಯ ಸಂಗತಿ ಏನೆಂದರೆ, ಅದು ಪ್ರಸ್ತುತ ಉದ್ದೇಶಕ್ಕೆ ಮತ್ತು ವ್ಯಕ್ತಿಗೆ/ಸಂಸ್ಥೆಗೆ, ಹಾಗೂ ಪ್ರದೇಶಕ್ಕೆ ಮತ್ತು ಕಾಲಕ್ಕೆ ಹೊಂದಿಕೆಯಾಗುತ್ತದೋ ಎಂಬುದು ತಿಳಿದಿರಬೇಕಾಗಿರುತ್ತದೆ.

ಪ್ರಸ್ತುತ ಉದ್ದೇಶಕ್ಕೆ ಮತ್ತು ವ್ಯಕ್ತಿಗೆ/ಸಂಸ್ಥೆಗೆ ಆಯ್ದ ಸ್ಥಳದಲ್ಲಿ ಸೂಕ್ತ ಶಕ್ತಿ ಮತ್ತು ಸ್ಪಂದನ ಸ್ಥಿತಿಯನ್ನು ಯೋಜಿಸಿ ನೆಲೆಗೊಳಿಸುವುದು ವಾಸ್ತುಶಾಸ್ತ್ರದ ಗುರಿಯಾಗಿದೆ. ಇಲ್ಲಿ ಜ್ಞಾನಬೇರಿನ; ಜೀವನ ಮತ್ತು ಪ್ರಕೃತಿಯ ಹಿಂದಿರುವ ವಿಜ್ಞಾನದ ಪ್ರಾಮುಖ್ಯತೆಯು ಮುಂಬರುತ್ತದೆ. ಈಗ, ಶಕ್ತಿವಿಜ್ಞಾನವು ತನ್ನ ಹೆಗಲಲ್ಲಿ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೆ.

ಜೀವನದ ಎಲ್ಲಾ ಮಗ್ಗುಲುಗಳ ವಿಜ್ಞಾನಗಳನ್ನು ಶಕ್ತಿವಿಜ್ಞಾನವು ಸ್ವತಂತ್ರವಾಗಿ ಆವರಿಸುತ್ತದೆ. ಅದು ಜೀವನದ ಎಲ್ಲಾ ಮಗ್ಗುಲುಗಳನ್ನು ಏಕಸೂತ್ರದಲ್ಲಿ ಜೋಡಿಸುತ್ತದೆ. ಹಾಗಾಗಿ ಏಕವೇದಿಕೆಯಿಂದ ಎಲ್ಲವನ್ನೂ ವಿವರಿಸುವ ಸಾಮರ್ಥ್ಯವು ಅದಕ್ಕಿದೆ.


6. ಇನ್ನಿತರ ಶಾಸ್ತ್ರಗಳು; ಶಕ್ತಿ ಮತ್ತು ವಾಸ್ತು; ಅನ್ವೇಷಣೆಯ ಸರಿಯಾದ ಹಳಿ.

ಶಕ್ತಿ ಮತ್ತು ವಾಸ್ತುಗಳ ಬೇರಿನ ಬಗ್ಗೆ ಮಾತಾಡುವಾಗ  ವೇದ, ವೇದಾಂಗ, ಶಿಲ್ಪ ಮತ್ತು ಆಗಮಗಳೊಂದಿಗೆ ದರ್ಶನಗಳು [ಭಾರತೀಯ ಸ್ವರೂಪದ ತತ್ವಶಾಸ್ತ್ರ] ಮುಂಚೂಣಿಯಲ್ಲಿ ಬರುತ್ತವೆ.

ನನ್ನ ಗುರುಗಳು ಪರಮಗುರುಗಳೊಡನೆ ಪ್ರಶ್ನಿಸಿದ್ದರು- “ವಾಸ್ತುಶಾಸ್ತ್ರದ ಹಿಂದಿರುವ ವಿಜ್ಞಾನವನ್ನು ತಿಳಿಸಿಕೊಡುವ ಗ್ರಂಥವು ಯಾವುದು?”. ಪರಮಗುರುಗಳು [ಭಾರತೀಯ ಸಾಂಪ್ರದಾಯಿಕ ಜ್ಞಾನದ ನಿಜವಿಜ್ಞಾನಿ ಮತ್ತು ಯೋಗಿವರೇಣ್ಯರು] ತಮ್ಮ ಬೆರಳನ್ನು ಒಮ್ಮೆ ಭಗವದ್ಗೀತೆಯೆಡೆಗೆ ತೋರಿಸಿದ್ದರು. ಈ ಗ್ರಂಥವು ನಿಜವಾಗಿ ಒಂದು ವೇದಾಂತ ದರ್ಶನ ಗ್ರಂಥವಾಗಿದೆ. ಇದು ಒಂದು ವಾಸ್ತುಗ್ರಂಥವೆಂದು ಯಾವರೀತಿಯಲ್ಲೂ ಪರಿಗಣಿತವಾಗಿಲ್ಲ. ಪರಮಗುರುಗಳು ನನ್ನ ಗುರುಗಳಿಗೆ ಜೀವನ ಮತ್ತು ವಿಶ್ವದ ವಿಜ್ಞಾನದ ಸಾರದೊಂದಿಗೆ ಈ ವಿಜ್ಞಾನದ ಅನ್ವಯದ ಕೈತುತ್ತನ್ನು ನೀಡಿದ್ದಾರೆ. ಈ ರೀತಿ ಗುರುಗಳನ್ನು ಅವರು ಅನ್ವೇಷಣೆಯ ಸರಿಯಾದ ಹಳಿಯಲ್ಲಿ ಮತ್ತು ಅನುಭವಪೂರ್ಣ ಅಭ್ಯಾಸದಲ್ಲಿ ಮುನ್ನಡೆಸಿದ್ದಾರೆ. ಇದು ನಮಗೆ ವಿವಿಧ ಶಾಸ್ತ್ರ ಗ್ರಂಥಗಳೊಳಗಿನ ಪರಸ್ಪರ ಸಂಬಂಧ ಸ್ವರೂಪವನ್ನು ತೋರಿಸಿಕೊಡುತ್ತದೆ.


7. ಅನ್ವೇಷಣೆಗಳ ಏಕಸೂತ್ರತೆ

ಇದರಿಂದ ದರ್ಶನಗಳು ಮತ್ತಿತರ ಶಾಸ್ತ್ರಗಳು ವೈವಿಧ್ಯಮಯ ಕಾಲುವೆಗಳಲ್ಲಿ ಮುಂಬರಿದು ಹರಿದಿದ್ದರೂ ಅವುಗಳಲ್ಲೊಂದು ಪರಸ್ಪರ ಬಂಧಿಸುವ ಬಲವಾದ ಏಕಸೂತ್ರದ ಇರುವಿಕೆಯು ಸ್ಪಷ್ಟಗೊಳ್ಳುತ್ತದೆ. ಈ ಸಮಾನಸೂತ್ರವು ಪಿಂಡಾಂಡ ಮತ್ತು ಬ್ರಹ್ಮಾಂಡಗಳ ವಿಜ್ಞಾನದ ಸಾರವನ್ನು ಹಿಡಿದಿಡುತ್ತದೆ. ಈ ಅನ್ವೇಷಣೆಯಲ್ಲಿ ನಾವು ವಿಶ್ವಾಸಪೂರ್ಣವಾಗಿ ಅನ್ವಯಿಸಬಲ್ಲ ಮತ್ತು ಬಹಳ ಫಲಪ್ರದವಾದ ಹಂತವನ್ನು ತಲಪಿರುತ್ತೇವೆ.

ಏಕಸೂತ್ರದ ಚೆನ್ನಾದ ಅರಿವು ಮತ್ತು ಆ ಮೂಲವಿಜ್ಞಾನದ ಅನ್ವಯೋಪಯೋಗಗಳು ನಮ್ಮ ಶಕ್ತಿಯಾಗಿದೆ. ನಾವು ವಾಸ್ತುವಿನ ಮತ್ತು ಇತರ ಜೀವನ ಮುಖಗಳ/ಳಿಗೆ ತಂತ್ರಜ್ಞಾನಗಳನ್ನು ವಿಕಸಿಸಿದ್ದೇವೆ [ಇನ್ನೂ ವಿಕಸಿಸುತ್ತಲೂ ಇದ್ದೇವೆ]. ನನ್ನ ಗುರುಗಳು ಕಾರ್ಯವನ್ನು ಆರಂಭಿಸಿದ್ದು ವಾಸ್ತುಶಾಸ್ತ್ರದಿಂದ. ಎಲ್ಲವೂ ಪರಸ್ಪರಾವಲಂಬಿಗಳೂ ಪರಸ್ಪರ ಸಂಬದ್ಧವಾದವುಗಳೂ ಆಗಿರುವುದರಿಂದ ಜೀವನದ ಬಹುಮುಖಗಳಿಗೆ ವಿಸ್ತರಿಸುವುದರಲ್ಲಿ ನಾವು ಈಗ ಯಶಸ್ವಿಯಾಗಿದ್ದೀವೆ.

ಪ್ರಾಚೀನ ಮತ್ತು ಅರ್ವಾಚೀನ ಕಾಲ ಘಟ್ಟದ ಪಾಶ್ಚಾತ್ಯ ಮತ್ತು ಪೌರಾತ್ಯ ಸಾಮಾನ್ಯತೀತ ಕ್ಷೇತ್ರದ ಸಂಶೋಧಕರು ಮತ್ತು ವಿದ್ವಾಂಸರು ಸಾಮಾನ್ಯತೀತ ವಿಜ್ಞಾನಗಳ ಬಗ್ಗೆ ಸಾಕಷ್ಟು ಬರೆದಿದ್ದಾರೆ. [ಮೂಲ ವಿಜ್ಞಾನ ದ್ರಷ್ಟಾರರುಗಳಾದ ಋಷಿಗಳಲ್ಲ] ಹೆಚ್ಚಿನವುಗಳು ಬೇರಿನ ಅರಿವಿಲ್ಲದ ತುಣುಕಗಳಾದರೂ ಕೂಡಾ ಅವುಗಳು ಶಕ್ತಿವಿಜ್ಞಾನವನ್ನು ಉತ್ತಮವಾಗಿಯೂ ಆಧುನಿಕವಾಗಿಯೂ ಅರ್ಥೈಸುವಲ್ಲಿ ನಮಗೆ ಉಪಯುಕ್ತವಾಗಿ ಒದಗಿವೆ.


8. ವೇದಗಳು, ದರ್ಶನಗಳು ಮತ್ತು ಇತರ ಗ್ರಂಥಗಳು.

ವೇದಗಳು ಋಷಿಗಳಿಗೆ ದರ್ಶಿತವಾದ, ಮನುಷ್ಯನಿಗೆ ಸಂಬಂಧಪಟ್ಟು ವಿಶ್ವದ ಬಗ್ಗಿನ ಜ್ಞಾನಸಂಗ್ರಹವಾಗಿದೆ. ಋಷಿಗಳನ್ನು ವೇದಗಳ ಬರಹಗಾರರೆನ್ನುವುದಿಲ್ಲ. ಋಷಿಗಳಿಗೆ ತಮ್ಮ ತಪಶ್ಚರ್ಯೆಯಲ್ಲಿ ಬ್ರಹ್ಮಾಂಡ ಸಂಪರ್ಕ್ಯವಾದ ಅತ್ಯುನ್ನತ ಸ್ಥಿತಿಯಲ್ಲಿದ್ದಾಗ [ಅಥವಾ ಮನಸ್ಸಿನ ಎಲ್ಲಾ ಮಿತಿಗಳನ್ನೂ ದಾಟಿದಾಗ] ದರ್ಶಿತವಾದವುಗಳು ವೇದಗಳೆಂದು ನಂಬಲಾಗಿದೆ. ವೇದಗಳು ನಾಲ್ಕಾಗಿ ವಿಭಜಿತವಾಗಿವೆ. ಅವು-

      1. ಋಕ್
      2. ಯಜುಸ್
      3. ಸಾಮ
      4. ಅಥರ್ವ

ಇವುಗಳಲ್ಲೂ ಬಹುಪರಂಪರೆಗಳಿವೆ.

ಆರು ವೇದಾಂಗಗಳೆಂದರೆ ಹೆಚ್ಚು ಅನ್ವಯಿಕವಾಗಿದ್ದು ವೇದಗಳಿಗಿರುವ ಬೆಂಬಲ ಶಾಸ್ತ್ರಗಳಾಗಿವೆ. ಅವು

        1. ಶಿಕ್ಷಾ
        2. ವ್ಯಾಕರಣಂ
        3. ಛಂದಃ
        4. ನಿರುಕ್ತಂ
        5. ಜ್ಯೋತಿಷಂ
        6. ಕಲ್ಪಃ

ಜ್ಯೋತಿಷ್ಯವು ಫಲಭಾಗ ಮತ್ತು ಜ್ಯೋತಿರ್ಗಣಿತಗಳೊಂದಿಗೆ ಸ್ವತಂತ್ರವಾಗಿಯೂ ವಿಸ್ತಾರವಾಗಿಯೂ ಬೆಳೆದಿದೆ. ಇದು ಶಕ್ತಿವಿಜ್ಞಾನದ ಆಳಬೇರುಗಳನ್ನು ಹೊಂದಿದ್ದು ಸರ್ವರಿಗೂ ಅತ್ಯುಪಯುಕ್ತವಾಗಿದೆ. ಕಲ್ಪವೂ ಶಕ್ತಿವಿಜ್ಞಾನದ ಮೂಲಾಂಶಗಳನ್ನು ಸ್ವಲ್ಪ ಹೊಂದಿದೆ. ಕಲ್ಪದಲ್ಲಿ ವಾಸ್ತು ಮತ್ತು ಶಿಲ್ಪಗಳ ಒಳನೋಟಗಳು ಇವೆ ಕಲ್ಪವು ಆಗಮದೊಂದಿಗೆ ನಿಕಟ ಸಂಬಂಧ ಹೊಂದಿದೆ.

ಆಗಮಗಳಿಗೆ [ತಂತ್ರ] ಶಕ್ತಿವಿಜ್ಞಾನದ ಬಲವಾದ ತಳಹದಿ ಇದೆ. ವ್ಯಾಪಕವಾಗಿಯೂ ಸ್ವತಂತ್ರವಾಗಿಯೂ ಬಹುಮುಖಗಳಲ್ಲೂ ಆಗಮಗಳು ಬೆಳೆದಿದ್ದರೂ ಅವುಗಳ ತಾಯಿಬೇರು ಕಲ್ಪ, ಯೋಗ ಮತ್ತು ಮೀಮಾಂಸಾ ದರ್ಶನಗಳಲ್ಲಿ ಇದೆ. “ದೇವಾಲಯ” ಎನ್ನುವ ಪರಿಕಲ್ಪನೆಯ ಪರಿಷ್ಕರಣೆ ಮತ್ತು ಉಪಾಸನಾ ತಂತ್ರಗಳು ಆಗಮಗಳಲ್ಲಿ ವಿಕಸಿತವಾದವುಗಳು. ಆಗಮಗಳ ಮೂಲದ ಇತಿಹಾಸವು ವೇದಪೂರ್ವಕ್ಕೆ ಸೇರುತ್ತದೆಂದೂ ಎನ್ನಲಾಗುತ್ತದೆ.

ದರ್ಶನಗಳೆಂದರೆ ಸೂಕ್ಷ್ಮ ಮತ್ತು ಭೂಮ ವಿಶ್ವಗಳ ಬಗ್ಗೆ ಚಿಂತಿಸುವ, “ಮನುಕುಲ ಮತ್ತು ಸಜೀವ-ನಿರ್ಜೀವ ಪ್ರಪಂಚ”ದಲ್ಲಿ ಲಂಗರು ಹಾಕಿರುವ ಭಾರತೀಯ ವಿಶಿಷ್ಟ ಸ್ವರೂಪದ, ಸ್ವತಂತ್ರವಾಗಿರುವ ತತ್ವಶಾಸ್ತ್ರೀಯ ಪಂಥ-ಪರಂಪರೆಗಳು. ಇವುಗಳ ನಿಷ್ಕೃಷ್ಟ ನೆಲೆಯು “ಮನುಕುಲ”ವಾಗಿದೆ.

ಆರು ಪ್ರಧಾನ ದರ್ಶನಗಳು [ಶಡ್ದರ್ಶನಗಳು] ಯಾವುವೆಂದರೆ

      1. ಸಾಂಖ್ಯ
      2. ಯೋಗ
      3. ವೇದಾಂತ
      4. ವೈಶೇಷಿಕ
      5. ನ್ಯಾಯ
      6. ಮೀಮಾಂಸಾ

ಈ ದರ್ಶನಗಳು ವೇದ ಪ್ರಾಮಾಣ್ಯವನ್ನು ಒಪ್ಪುತ್ತವೆ. ಇವು ಆಸ್ತಿಕ ದರ್ಶನಗಳೆಂದು ಕರೆಯಲ್ಪಡುತ್ತವೆ.

ಶಡ್ದರ್ಶನಗಳ ಹೊರತಾದ ದರ್ಶನಗಳೂ ಇವೆ. ಅವೆಂದರೆ, ಜೈನ ಮತ್ತು ಬೌದ್ಧ. ಇವೂ ಶ್ರೇಷ್ಠವಾದ ಸುವ್ಯಾವಹಾರಿಕ ದರ್ಶನಗಳೇ ಆಗಿವೆ. ಆದರೆ ಅವು ವೇದ ಪ್ರಾಮಾಣ್ಯವನ್ನು ಸ್ವೀಕರಿಸುವುದಿಲ್ಲ. ಇವುಗಳನ್ನು ನಾಸ್ತಿಕ ದರ್ಶನಗಳೆಂದು ಕರೆಯುತ್ತಾರೆ.

ಸಾಂಖ್ಯ, ಯೋಗ ಮತ್ತು ವೇದಾಂತ ದರ್ಶನಗಳು ಶಕ್ತಿವಿಜ್ಞಾನ ಮತ್ತು ವಾಸ್ತುಶಾಸ್ತ್ರಗಳಿಗೆ ಮೂಲವಾದ ಬಹುಮುಖ್ಯವಾದ ಶಾಸ್ತ್ರಗಳು. ನ್ಯಾಯ [ತರ್ಕ] ಸಹಿತ ವೈಶೇಷಿಕ ದರ್ಶನವೂ ಅಮುಖ್ಯವಲ್ಲ. ಮೀಮಾಂಸಾದರ್ಶನವೂ ಶಕ್ತಿವಿಜ್ಞಾನದ ಕೆಲವು ದೃಷ್ಟಿಗಳನ್ನು ಹೊಂದಿದೆ.

ಭೂಮ ವಿಶ್ವವು ಅದರ ಇಳಿಅಳತೆಯ ತುಣುಕಾದ ಭೂಮಿ/ಸ್ಥಳ/ಕೊನೆಗೆ ಜೀವಪ್ರಪಂಚ, ಅದರಲ್ಲೂ ಮನುಷ್ಯ- ಈ ಸೂಕ್ಷ್ಮ ವಿಶ್ವದೊಂದಿಗೆ ಹೊಂದಿರುವ ಸಂಬಂಧವನ್ನು ವಿವರಿಸುವ ಅತಿ ಪ್ರಮುಖ ಶಾಸ್ತ್ರವು ಯೋಗ ಶಾಸ್ತ್ರ ಅಥವಾ ಯೋಗದರ್ಶನವಾಗಿದೆ. ನಿಜವಾಗಿ ಅದು ಮಾನವನನ್ನು ಮತ್ತು ಸಜೀವ ಅಸ್ತಿತ್ವದ ವಿಜ್ಞಾನವನ್ನು ಗುರಿಯಾಗಿಸಿದೆ. ಅದು ಮನೋಭೌತಿಕ ಪ್ರಪಂಚದ ಬಗ್ಗೆ ತಿಳಿಸಿಕೊಡುತ್ತದೆ. ಅದು “ಸ್ವ-ನಿಯಂತ್ರಣ”ದ [“ಸ್ವ”’ತ್ತಿನಬಗ್ಗೂ ವಿಮರ್ಶಿಸಿ ನಿರ್ವಚಿಸುತ್ತದೆ] ಬಗ್ಗೆ ಗತಿಸಬೇಕಾದ ದಾರಿಯನ್ನು ವಿವರಿಸುತ್ತದೆ. ಯೋಗ ಶಾಸ್ತ್ರವು ಆಗಮ, ಜ್ಯೊತಿಷ್ಯ ಮತ್ತು ವಾಸ್ತುಗಳೊಂದಿಗೆ ಅತಿ ನಿಕಟ ಸಂಬಂಧವನ್ನು ಹೊಂದಿದೆ. ಯೋಗ ಶಾಸ್ತ್ರವು ವೈಜ್ಞಾನಿಕ, ವ್ಯಾವಹಾರಿಕ ಮತ್ತು ದಾರ್ಶನಿಕ ಬಳಿಸಾರುವಿಕೆಯನ್ನು ಹೊಂದಿದ್ದು ಸ್ವತಂತ್ರವಾಗಿ ಬೆಳೆದಿರುವ ಒಂದು ದರ್ಶನವಾಗಿದೆ.

ಜೀವನ ಮತ್ತು ವಿಶ್ವದ ಸಮಗ್ರವಾದ ಜ್ಞಾನವನ್ನು ಪರಿಗಣಿಸಿದಾಗ ಯಾವುದೇ ಶಾಸ್ತ್ರವೂ ಸ್ವತಂತ್ರವಲ್ಲ. ಈ ಸನ್ನಿವೇಶದೊಳಗೆ ತಮ್ಮದೇ ಸೀಮಿತ ಗ್ರಹಿಕಾ ಇತಿಮಿತಿಗಳಲ್ಲಿರುವ ಆಧುನಿಕ ವಿಜ್ಞಾನಗಳೂ ಕೂಡಾ ಅಗ್ರಸ್ಥಾನಕ್ಕೆ ಬರುತ್ತವೆ. ಪ್ರತಿಯೊಂದು ಶಾಸ್ತ್ರವೂ ತನ್ನದೇ ಗುರಿ/ಉದ್ದೇಶದೆಡೆಗೆ ಕೇಂದ್ರೀಕರಿಸಿಕೊಳ್ಳಲು ತನ್ನ ಗ್ರಹಿಕಾ ವಿಸ್ತಾರವನ್ನು ಸೀಮಿತಗೊಳಿಸಿಕೊಳ್ಳುತ್ತದೆ. ಹಾಗಾಗಿ ಆಧುನಿಕ ವಿಜ್ಞಾನಗಳ ಸಹಿತ ಎಲ್ಲಾ ಶಾಸ್ತ್ರಗಳ ಸಮಾನ[ಏಕ] ಸೂತ್ರವನ್ನು ಕಂಡೆತ್ತಿ ಅವುಗಳನ್ನು ಒಗ್ಗಟ್ಟು ಮಾಡಿ ಸಂಘಟಿಸುವುದು ಅವಶ್ಯವಾಗಿದೆ. ನಮ್ಮ ಶೋಧನೆಯು ಇದೇ ಕಾರ್ಯದಲ್ಲಿ ಮತ್ತು ಪರಿಹಾರ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಕೇಂದ್ರೀಕೃತವಾಗಿದೆ. ಪ್ರಸ್ತುತ ನಾವು ನಿರ್ದಿಷ್ಟ ಫಲಪ್ರದ ಮಟ್ಟವನ್ನು ತಲಪಿದ್ದೇವೆ.


9. ಬ್ರಹ್ಮಾಂಡ, ಪಿಂಡಾಂಡ ಮತ್ತು ಅಂತರ್ಮುಖ/ಬಹಿರ್ಮುಖ ಶೋಧನೆ

ಬ್ರಹ್ಮಾಂಡವೆಂದರೆ ಸಂಪೂರ್ಣವಾದ ವಿಶ್ವ. ಅದು ನಮ್ಮ ಕಣ್ಣಿಗೆ ಕಾಣುತ್ತಿರುವ ಭೌತಿಕ ಪ್ರಪಂಚ ಮಾತ್ರವಲ್ಲ; ಅದು ಎಲ್ಲಾ ಆಯಾಮಗಳನ್ನೊಳಗೊಂಡ ಸಂಪೂರ್ಣ ವಿಶ್ವ. ಪ್ರಪಂಚದ ಎಲ್ಲಾ ಆಯಾಮಗಳೂ ಮನುಷ್ಯನಿಂದ ಶೋಧಿಸಲ್ಪಟ್ಟಿಲ್ಲ. ಅದು ಆವಶ್ಯಕವೂ ಅಲ್ಲ; ಮತ್ತು ಆ ಕಾರಣದಿಂದ ಬ್ರಹ್ಮಾಂಡವು ಮನುಜನಿಗೆ ಸಂಪೂರ್ಣವಾಗಿ ತೆರೆದುಕೊಳ್ಳುವುದಿಲ್ಲ. ಮನುಷ್ಯನು ಬ್ರಹ್ಮಾಂಡವನ್ನು ಎರಡು ದಿಶೆಗಳಲ್ಲಿ ಶೋಧಿಸುತ್ತಾನೆ. ಒಂದು ಹೊರಮುಖಿಯಾದ ಶೋಧನೆ [ಬಹಿರ್ಮುಖ ಶೋಧನೆ] ಮತ್ತು ಇನ್ನೊಂದು ಒಳಮುಖಿಯಾದ ಶೋಧನೆ. [ಅಂತರ್ಮುಖ ಶೋಧನೆ]
ಬಹಿರ್ಮುಖ ಶೋಧನೆಯನ್ನು ಕೆಲವು ಹಂತಗಳ ನಂತರ ನಡೆಸಿ ಮುಂದುವರಿಸಲು ಸಾಧ್ಯವಾಗುವುದಿಲ್ಲ. ಅದು ನಮ್ಮ ಇಂದ್ರಿಯ ಹಾಗೂ ಸಾಮಾನ್ಯ ಕಲ್ಪನಾ ಮತ್ತು ಪೃಥಕ್ಕರಣಾ ಸಾಮರ್ಥ್ಯಕ್ಕೆ ಮಿತಿಗೊಳ್ಳುತ್ತದೆ. ಮೆಟಾಫಿಸಿಕ್ಸ್, ಸಮಾಜ ವಿಜ್ಞಾನ ಇತ್ಯಾದಿಗಳು ಮತ್ತು ಆಧುನಿಕ ವೈಜ್ಞಾನಿಕ ಚಿಂತನೆ- ಸಿದ್ಧಾಂತ- ಅನ್ವಯಿಕ ವಿಜ್ಞಾನಗಳೆಲ್ಲವೂ ಪೂರ್ಣವಾಗಿ ಈ ವರ್ಗಕ್ಕೇ ಒಳಪಡುತ್ತವೆ.
ಅಂತರ್ಮುಖ ಶೋಧನೆ ಎಂದರೆ, ಎಲ್ಲಾ ಮತಿಯ ಮಿತಿಗಳಾಚೆಯವರೆಗೆ ಶೋಧಿಸಿ ಆತ್ಯಂತಿಕ ಸತ್ಯವನ್ನು ತಲಪುವುದಾಗಿದೆ. ಈ ಸತ್ಯವು ಬಹುಶಃ: ಮನುಜನು ಏರಬಹುದಾದ ಗರಿಷ್ಠ ಹಂತದಲ್ಲಿ ಮಿತಿಗೊಳ್ಳುತ್ತದೆ. ಹೇಗೇ ಆದರೂ, ಆಂತರಿಕ ಶೋಧನೆಯ ಮೂಲಕ ಏರಬಹುದಾದ ಗರಿಷ್ಠ ಗ್ರಹಣ ಮಟ್ಟದಲ್ಲಿ ಆಂತರಿಕ ಶೋಧನ ಮಾರ್ಗದಲ್ಲಿ ಮನುಜನು ಬ್ರಹ್ಮಾಂಡವನ್ನು ಅದರ ಆತ್ಯಂತಿಕ ಸತ್ಯವನ್ನೂ ತಿಳಿದುಕೊಳ್ಳುತ್ತಾನೆ. ಇದು ಮನುಷ್ಯನು ಹೊಂದಬಹುದಾದ ಅತ್ಯುನ್ನತವಾದ ವಿಶ್ವ ಸತ್ಯ. ವೇದಗಳು ದರ್ಶನಗಳು ಇತ್ಯಾದಿಗಳೆಲ್ಲಾ ಅಂತಃಶೋಧನೆಯ ದಾಖಲಾತಿಗಳು.
“ಪಿಂಡಾಂಡ”ವು “ಬ್ರಹ್ಮಾಂಡ”ದ ಇಳಿಅಳತೆಯ ಮೂಲವೇ ಆದ ಘಟಕವಾಗಿದೆ. ಸಜೀವ ಮನುಷ್ಯನು “ಪಿಂಡಾಂಡ”ವೆಂದು ಕರೆಯಲ್ಪಡುತ್ತಾನೆ. “ಪಿಂಡಾಂಡ”ವು “ಬ್ರಹ್ಮಾಂಡ”ದ ಎಲ್ಲವನ್ನೂ ಹೊಂದಿದೆ. ಪಿಂಡಾಂಡವು ತಿಳಿದುಕೊಳ್ಳುವ, ಅನುಭವಗಳಿಸುವ, ಸೇರಿಕೊಳ್ಳುವ – ಅತ್ಯುನ್ನತ ಗ್ರಹಿಕೆಯ ಹಂತವನ್ನು ತಲಪುವ ವರೆಗೆ ಕಾಣ್ಕೆಯು ಪಿಂಡಾಂಡದಿಂದ ಬ್ರಹ್ಮಾಂಡಕ್ಕೆ ರೂಪಾಂತರಗೊಳ್ಳದು. ಆ ಹಂತದ ವರೆಗೂ ದ್ವಂದ್ವವು ಇದ್ದೇ ಇರುತ್ತದೆ. ಆ ಹಂತದ ವರೆಗೆ ದ್ವಂದ್ವ-ದ್ವೈತವು ಸತ್ಯವೇ ಆಗಿರುತ್ತದೆ. ನಮ್ಮರಿವಿನ ಪ್ರತೀ ಹಂತದಲ್ಲಿ ನಾವರಿಯುವ, ನೋಡುವ ಎಲ್ಲವೂ ಆಯಾ ಹಂತದಲ್ಲಿ ಮಾತ್ರ ಸತ್ಯವಾಗಿಯೇ ಇರುತ್ತದೆ. ಬಹಿರ್ಮುಖ ಶೋಧನೆಯಲ್ಲೂ ಹಾಗೆಯೇ- ಆಧುನಿಕ ಭೌತಶಾಸ್ತ್ರದಲ್ಲಿ

ಜಡ ಚೌಕಟ್ಟು

ಪರಿಮಾಣ ಭೌತಶಾಸ್ತ್ರ

ಶ್ರೋಡಿಂಜರ್ ಸಮೀಕರಣ

ಸಾಪೇಕ್ಷ ಸಿದ್ಧಾಂತ

ಹೈಸನ್ಬರ್ಗ್’ನ ಅನಿಶ್ಚಿತತಾ ನಿಯಮ

ಇತ್ಯಾದಿಗಳು ಸಾರೂಪ್ಯತೆಯನ್ನು ಕಾಣಿಸುತ್ತವೆ. ಈಗಾಗಲೇ ಹೇಳಿದಂತೆಯೇ, ಬಹಿರ್ಮುಖ ಶೋಧನೆಯು ಗಣಿತವೆನ್ನುವ ಸನ್ನೆಯನ್ನುಪಯೋಗಿಸಿಯೂ ಪರಿಮಿತವಾದ ಗ್ರಹಣ ಮಟ್ಟವನ್ನಷ್ಟೇ ಹೊಂದಿರುತ್ತದೆ.
ಪುನರಪಿ, ಮೆಟಾಫಿಸಿಕ್ಸ್’ನ ಸಿದ್ಧಾಂತಗಳು ಮನುಜನಿಗನ್ವಯಿಸಿ ಭೌತಿಕ ಸತ್ಯಗಳಾಗಿರಬೇಕಾಗಿಲ್ಲ ಎನ್ನುವುದನ್ನು ನಾವರಿತುಕೊಳ್ಳಬೇಕು. ಆದರೆ, ಅಂತಃಶೋಧನೆಯ ಆನುಭಾವಿಕ ತಿಳುವಳಿಕೆಗಳು ಮನುಜನಿಗನ್ವಯಿಸಿ ಮಿತಿಗೊಂಡ ಅವನೆಲ್ಲಾ ಒಳ ಮತ್ತು ಸಂಬಂಧಿತ ಹೊರ ಪ್ರಪಂಚವನ್ನು ಪೂರ್ಣವಾಗಿ ಆವರಿಸುವ ಸತ್ಯಗಳೇ ಆಗಿವೆ.


10. ಪಂಚಭೂತಗಳು.

ಮನುಷ್ಯನಿಗನ್ವಯಿಸಿ ವಿಕಸಿಸಿ ಪ್ರಸ್ತುತ ಸ್ಥಿತಿಯಲ್ಲಿರುವ ಈ ಬ್ರಹ್ಮಾಂಡ- ಈ ಪ್ರಪಂಚದ ವಿಕಸನ ಮೂಲಧಾತುಗಳೇ “ಪಂಚಭೂತಗಳು”. ಮನುಷ್ಯ- ಪಿಂಡಾಂಡವೂ ಪಂಚಭೂತಗಳಿಂದಲೇ ನಿರ್ಮಿತವಾಗಿದೆ. ಅವುಗಳೆಂದರೆ,

      1. ಆಕಾಶ (ಆಗಸ)
      2. ವಾಯು (ಗಾಳಿ)
      3. ಅಗ್ನಿ (ಬೆಂಕಿ)
      4. ಜಲ (ನೀರು)
      5. ಪೃಥ್ವಿ (ಭೂಮಿ)

ಇವುಗಳನ್ನು ವಿಕಸನ ಮೂಲಧಾತುಗಳೆಂದು ಕರೆಯಬಹುದು. ಯಾಕೆಂದರೆ, ವಾಯುವು ಆಕಾಶದಿಂದ ವ್ಯುತ್ಪನ್ನವಾಗುತ್ತದೆ ಮತ್ತು ವಾಯುವಿನಲ್ಲಿ ಆಕಾಶವು ಅಂತರ್ಗತವಾಗಿರುತ್ತದೆ. ಅಗ್ನಿಯು ವಾಯುವಿನಿಂದ ವ್ಯುತ್ಪನ್ನವಾಗುತ್ತದೆ ಮತ್ತು ಅಗ್ನಿಯಲ್ಲಿ ವಾಯು ಹಾಗೂ ಆಕಾಶಗಳು ಅಂತಸ್ಥವಾಗಿರುತ್ತವೆ. ಹಾಗೆಯೇ, ಜಲವು ಅಗ್ನಿಯಿಂದ ವ್ಯುತ್ಪನ್ನವಾಗುತ್ತದೆ; ಮತ್ತದರಲ್ಲಿ ಅಗ್ನಿ, ವಾಯು ಹಾಗೂ ಆಕಾಶಗಳು ಅಂತಸ್ಥವಾಗಿರುತ್ತವೆ. ಪೃಥ್ವಿಯು ಜಲದಿಂದ ವ್ಯುತ್ಪನ್ನವಾಗುತ್ತದೆ; ಮತ್ತದರಲ್ಲಿ ಉಳಿದೆಲ್ಲಾ ಮೂಲಧಾತು/ತತ್ವಗಳೂ ಅಂತಸ್ಥವಾಗಿರುತ್ತವೆ.


11. ಶಿವ- ಶಕ್ತಿ ಮತ್ತು ಶಕ್ತಿ ವಿಜ್ಞಾನ

ಬ್ರಹ್ಮಾಂಡವೆನ್ನುವ ವ್ಯವಸ್ಥೆಯು ಶುದ್ಧರೂಪದಲ್ಲಿರುವ ಆತ್ಯಂತಿಕ ಮೂಲಸತ್ಯವು “ಶಿವ” (ಇದು ಬ್ರಹ್ಮಾಂಡ ಪ್ರಜ್ಞೆಯೂ ಆಗಿದೆ) ಮತ್ತು ವಿಶ್ವದ ಮುಂಚಲನೆಯು “ಶಕ್ತಿ”ಯಿಂದ, ಅಂದರೆ ಪೂರ್ಣವಾದ ಶುದ್ಧ ವಿಶ್ವಚೈತನ್ಯ/ಬ್ರಹ್ಮಾಂಡ ಶಕ್ತಿ ಯಿಂದಾಗುತ್ತದೆ. ಈ ಶಕ್ತಿಯು “ಶಿವ”ನ ವಿವಿಧ ಪ್ರಜ್ಞಾಸ್ತರಗಳಲ್ಲಿ ವಿವಿಧ ರೂಪಗಳಲ್ಲಿ ಸಂಯೋಜಿತಗೊಳ್ಳುತ್ತದೆ ಮತ್ತು ವಿವಿಧ ರೂಪಗಳಿಗೆ ಬದಲಿಕೊಳ್ಳುತ್ತದೆ. ಅದು ಮನುಷ್ಯ- ಪಿಂಡಾಂಡದೊಂದಿಗೆ ಪರಸ್ಪರ ಪ್ರಭಾವಿಸಿದಾಗ ವಿವಿಧ ಸ್ಪಂದನಗಳನ್ನುಂಟುಮಾಡುತ್ತದೆ. ಪಿಂಡಾಂಡವು ಬ್ರಹ್ಮಾಂಡದ ಅಂಗವೇ ಆದರೂ ನಾವು ಮನುಜರು ಬ್ರಹ್ಮಾಂಡ- ಪಿಂಡಾಂಡಗಳ ಸಂಬಂಧವನ್ನು ಅರಿತಿದ್ದರೆ ಒಳ್ಳೆಯದು. ಪುನರಪಿ, ಮನುಜರು ಬ್ರಹ್ಮಾಂಡದ ಬಗ್ಗೆ ತಿಳಿದಿರುವುದು ಅಮಿತಪೂರ್ಣವಲ್ಲ; ಆದರೆ ಇರುವ ಬ್ರಹ್ಮಾಂಡದ ಅರಿವು (ಆಗಲು ಸಾಧ್ಯವಿರುವ ಅರಿವು) ಪಿಂಡಾಂಡಕ್ಕೆ ಸೀಮಿತವಾಗಿ ಇರುವಂಥಾದ್ದು.
“ಶಕ್ತಿವಿಜ್ಞಾನ”ವು ಏನೆಂದರೆ, ಪಿಂಡಾಂಡದೊಳಗಿರುವ ರೂಪ ಮತ್ತು ಶಕ್ತಿಗಳು ಬ್ರಹ್ಮಾಂಡದೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಮತ್ತು ಮನುಜನೊಂದಿಗೆ/ಜೀವ ಪ್ರಪಂಚದೊಂದಿಗೆ ಪರಸ್ಪರ ಪ್ರಭಾವಿಸುವ ಬಾಹ್ಯ ಶಕ್ತಿಗಳ ಬಗ್ಗಿರುವ ತಿಳುವಳಿಕೆಗಳಾಗಿವೆ.


12. ಕೋಶ, ಚಕ್ರ, ನಾಡಿ.

ಪಿಂಡಾಂಡವು ರೂಪೀಕೃತವಾದಾಗ, ಆ ಸಜೀವ ವ್ಯವಸ್ಥೆಯು ಅನುಕ್ರಮವೂ ಒಂದಿನ್ನೊಂದರಲ್ಲಿ ಅಂತರ್ಗತವೂ ಆದ ಐದು ಕೋಶಾತ್ಮಕ (ಆವರಣ) ಮಟ್ಟಗಳನ್ನು ಹೊಂದಿರುತ್ತದೆ. ಆದರೆ ಪ್ರತಿಯೊಂದು ಕೋಶಕ್ಕೂ ಸ್ವತಂತ್ರವಾದ ಅಸ್ತಿತ್ವವೂ ಇದೆ. ಕೋಶಗಳಿಂತಿವೆ,

      1. ಅನ್ನಮಯ ಕೋಶ
      2. ಪ್ರಾಣಮಯ ಕೋಶ
      3. ಮನೋಮಯ ಕೋಶ
      4. ವಿಜ್ಞಾನಮಯ ಕೋಶ
      5. ಆನಂದಮಯ ಕೋಶ
        1. ಅನ್ನಮಯ ಕೋಶವು ಸಜೀವ ವ್ಯವಸ್ಥೆಯ ಅತ್ಯಂತ ಪ್ರಾಥಮಿಕ ಮತ್ತು ಮೂಲಭೂತ ಹಂತ; ಅದು ಅನ್ನದಿಂದ- ಆಹಾರದ ಸಾರಾಂಶದಿಂದ ಉಂಟಾಗುವ ಭೌತಿಕ ಶರೀರವಾಗಿದೆ.
        2. ಪ್ರಾಣಮಯ ಕೋಶವು ಜೀವಚೈತನ್ಯ ಶರೀರವಾಗಿದೆ.
        3. ಮನೋಮಯ ಕೋಶವು ಪ್ರಜ್ಞೆಯ- ಬುದ್ಧಿಯ- ಮನಸ್ಸಿನ ಶರೀರವಾಗಿದೆ.
        4. ವಿಜ್ಞಾನಮಯ ಕೋಶವೆಂದರೆ, ಸಾಮಾನ್ಯ ಮನಸ್ಸಿನಿಂದ ಅತಿಕ್ರಾಂತವಾದ ಉಚ್ಚ ಪ್ರಜ್ಞೆಯಿರುವ ಕೋಶ. ಅದು ಬ್ರಹ್ಮಾಂಡ ಪ್ರಜ್ಞೆಯೊಂದಿಗೆ ಸಂಪರ್ಕಿಸುವ ಶರೀರವಾಗಿದೆ. ಅದಕ್ಕೆ “ಶಕ್ತಿ”ಯನ್ನು ಸಂಪೂರ್ಣವಾಗಿ ನಿಯಂತ್ರಿಸುವ ಸಾಮರ್ಥ್ಯವಿದೆ.
        5.   ಶಕ್ತಿಯುಶಿವನೊಂದಿಗೆ (ಬ್ರಹ್ಮಾಂಡಪ್ರಜ್ಞೆಯೋದಿಗೆ) ಸೇರುವ; ಹಾಗೆ, ಏಕವಾಗುವ ಆ ಶರೀರವು ಆನಂದಮಯ ಕೋಶವಾಗಿದೆ. ಇಲ್ಲಿಪಿಂಡಾಂಡವೇಬ್ರಹ್ಮಾಂಡ; ಹಾಗೆ ಪಿಂಡಾಂಡಕ್ಕೆ ಅರಿವಾಗುತ್ತದೆ.

ಶಕ್ತಿಯು ಶಿವನೊಂದಿಗೆ (ಬ್ರಹ್ಮಾಂಡ ಪ್ರಜ್ಞೆಯೋದಿಗೆ) ಸೇರುವ; ಹಾಗೆ, ಏಕವಾಗುವ ಆ ಶರೀರವು ಆನಂದಮಯ ಕೋಶವಾಗಿದೆ. ಇಲ್ಲಿ ಪಿಂಡಾಂಡವೇ  ಬ್ರಹ್ಮಾಂಡ; ಹಾಗೆ ಪಿಂಡಾಂಡಕ್ಕೆ ಅರಿವಾಗುತ್ತದೆ.
ಅನ್ನಮಯ ಕೋಶವು ಪ್ರಾಣಮಯಕೋಶದೊಂದಿಗೆ ವಿಲೀನಗೊಂಡಿರುತ್ತದೆ; ಪ್ರಾಣಮಯವು ಮನೋಮಯದೊಂದಿಗೂ, ಹಾಗೆ ಮುಂದಿನವುಗಳೂ ಇರುತ್ತವೆ.
ಆದರೆ, ಮನೋಮಯ ಕೊಶವು ಸಾಮನ್ಯ ಮಿತಿಕಾರಕ ಕೋಶ. ಅದು ವಿವಿಕ್ತತೆಗೆ/ಪ್ರತ್ಯೇಕತೆಗೆ – ಒಂದಿನ್ನೊಂದರಿಂದ ಭಿನ್ನವೆನ್ನುವ “ಅಹಂ”ಗೆ ಉತ್ತರದಾಯಿಯಾಗಿದೆ. ಮನೋಮಯ ಕೋಶವು ಮನುಜನನ್ನು ವಿಶ್ವದಿಂದ ಪ್ರತ್ಯೇಕಿಸುತ್ತದೆ. ಹಾಗೆ, ಈ ಸೂಕ್ಷ್ಮ ವಿಶ್ವವು ಭೂಮ ವಿಶ್ವಕ್ಕಿಂತ ಭಿನ್ನವೆಂದು ಭಾವಿಸಿಕೊಳ್ಳುತ್ತದೆ. ಈ ಮಿತಿಕಾರಕ ಕೋಶವು ಸಸ್ಯ ಮತ್ತು ಸೂಕ್ಷ್ಮಾಣು ಜೀವಿಗಳೇ ಮುಂತಾದ ಗೂಢವೂ ಸೂಕ್ಷ್ಮವೂ ಆದ ಸಜೀವ ಪ್ರಪಂಚಾಂಶದಲ್ಲೂ ಬಹುಶ: ಕಾರ್ಯರತವಾಗಿರುತ್ತದೆ. ಇದು ನಿರ್ಜೀವ ಪ್ರಪಂಚದಲ್ಲೂ ಸತ್ಯವಾಗಿರಲೂ ಬಹುದು.
ಮನುಷ್ಯ”ನು ಬಹುಶ: ಈ ಭೂಮಿಯ ಅತ್ಯಂತ ವಿಕಸಿತ ಸಜೀವ ದ್ರವ್ಯ; ಯಾಕೆಂದರೆ, ನಮಗೆ ತಿಳಿದಿರುವಂತೆ ಮನುಷ್ಯನು ಮಾತ್ರ ತನ್ನ ಪ್ರಜ್ಞಾಮಟ್ಟವನ್ನು ಆನಂದಮಯ ಕೋಶಕ್ಕೆ ಎತ್ತರಿಸಿಕೊಳ್ಳಬಲ್ಲ. ಅವನು ಪಿಂಡಾಂಡದಲ್ಲಿ ಇರುತ್ತಾ ತನ್ನನು ತಾನು ಬದಲಾಯಿಸಿ ಬ್ರಹ್ಮಾಂಡದೊಂದಿಗೆ ವಿಲೀನಗೊಳಿಸಿಕೊಳ್ಳಬಲ್ಲ (ಜೀವನ್ಮುಕ್ತ). ಅವನ ಪ್ರಜ್ಞೆಯು ಬ್ರಹ್ಮ ಪ್ರಜ್ಞೆಯೊಂದಿಗೆ (ಶಿವನೊಂದಿಗೆ) ಸಂಪೂರ್ಣವಾಗಿ ವಿಲೀನವಾಗುತ್ತದೆ. ಪಿಂಡಾಂಡ ಪ್ರಜ್ಞೆಯು ವಿವಿಧ ಉನ್ನತ ಹಂತಗಳನ್ನು ಮುಟ್ಟಿದರೂ, ಆ ಎಲ್ಲಾ ಹಂತಗಳಲ್ಲೂ ಬ್ರಹ್ಮಾಂಡವು ತನ್ನೆಲ್ಲಾ ರಹಸ್ಯಗಳನ್ನು ತೆರೆಯಬೇಕೆಂದೆನೂ ಇಲ್ಲ. ಆದರೆ ಆ ಪ್ರಜ್ಞಾಪೂರ್ಣ ಸಜೀವ ದ್ರವ್ಯಕ್ಕೆ ಏನವಶ್ಯವೋ, ಅದಕ್ಕೆ ಎಷ್ಟೆಂದು ನಿರ್ಣೀತವೋ ಅವೆಲ್ಲವನ್ನೂ ತೆರೆಯುತ್ತದೆ. ಈವಿಚಾರವು ಬಹಿರ್ಮುಖ ಶೋಧನೆಯಲ್ಲೂ ಸತ್ಯವಾಗಿದೆ.
ಚಕ್ರಗಳು ಸಜೀವ ವ್ಯವಸ್ಥೆಯಲ್ಲಿರುವ (ಮನುಷ್ಯನ) ವಿಶ್ವದ ನಿರ್ದಿಷ್ಟ ಅಂಶಗಳ ಪ್ರಾತಿನಿಧಿಕವಾದ, ನಿಯಂತ್ರಕವಾದ, ಸಂಪರ್ಕ ಕಾರಕವಾದ, ಸಂಪರ್ಕ ದಾಯಕವಾದ ಸಂಯುಕ್ತ ಕೇಂದ್ರಗಳು. ಸಂಪರ್ಕ ಮತ್ತು ನಿಯಂತ್ರಣಾವಶ್ಯವಾದ ಜಾಲವು ನಾಡೀ ವ್ಯವಸ್ಥೆಯಾಗಿದೆ. ಇವುಗಳ ಭೌತಿಕವಾದ ಅಸ್ತಿತ್ವವನ್ನು ಗುರುತಿಸಲಾಗುವುದಿಲ್ಲ.
“ಸುಷುಮ್ನಾ” ಎಂದು ಕರೆಯಲ್ಪಡುವ ಒಂದು ಪ್ರಧಾನ ನಾಡಿ ಇದೆ.
ಆ ಮೇಲಿನ ಪ್ರಮುಖ ನಾಡಿಗಳು,

      1. ಇಡಾ
      2. ಪಿಂಗಳಾ

ಆಮೇಲೆ ಸಾವಿರಾರು ನಾಡಿಗಳು ವ್ಯವಸ್ಥೆಯೊಂದರಲ್ಲಿ ಕಾರ್ಯನಿರತವಾಗಿರುತ್ತವೆ. 720 ಪ್ರಧಾನ ನಾಡಿಗಳೆಂದೂ; 72000 ನಾಡಿಗಳಿವೆಯೆಂದೂ ಹೇಳುತ್ತಾರೆ.
ಒಟ್ಟು 6+1 ಪ್ರಧಾನ ಚಕ್ರಗಳಿವೆ. ಆರರ ಗುಂಪನ್ನು “ಷಟ್ಚಕ್ರ”ಗಳೆನ್ನುತ್ತಾರೆ. ಅವು,

      1. “ಮೂಲಾಧಾರ ಚಕ್ರ”ವು ಬೆನ್ನುಮೂಳೆಯ ಮೂಲದಲ್ಲಿ, ಗುದ ಲಿಂಗಗಳ ಮಧ್ಯದಲ್ಲಿ ಸ್ಥಿತವಾಗಿರುತ್ತದೆ.
      2. “ಸ್ವಾಧಿಷ್ಠಾನ ಚಕ್ರ”ವು ಲಿಂಗ ಭಾಗ ಮತ್ತು ಹೊಕ್ಕುಳ ಭಾಗಗಳ ಮಧ್ಯದಲ್ಲಿ ಸ್ಥಿತವಾಗಿರುತ್ತದೆ.
      3. “ಮಣಿಪೂರ ಚಕ್ರ”ವು ಹೊಕ್ಕುಳ ಕುಳಿ ಭಾಗದಲ್ಲಿ ಇರುತ್ತದೆ.
      4. “ಅನಾಹತ ಚಕ್ರ”ವು ಹೃದಯ ಕುಳಿ ಭಾಗದಲ್ಲಿ ಇರುತ್ತದೆ.
      5. “ವಿಶುದ್ದಿ ಚಕ್ರ”ವು ಕೊರಳ ಕುಳಿ ಭಾಗದಲ್ಲಿ ಇರುತ್ತದೆ.
      6. “ಆಜ್ಞಾ ಚಕ್ರ”ವು ಭ್ರೂಮಧ್ಯದಲ್ಲಿ ಇರುತ್ತದೆ.

ಕೊನೆಗೆ ಏಳನೆಯದಾದ “ಸಹಸ್ರಾರ ಚಕ್ರ”ವು ನೆತ್ತಿಯ ಮೇಲ್ಭಾಗದಲ್ಲಿರುತ್ತದೆ.
ಭೂಮ ವಿಶ್ವವು ಸೂಕ್ಷ್ಮ ವಿಶ್ವದೊಂದಿಗೆ ಸಂಪರ್ಕ ಸಾಧಿಸುವ ಕೇಂದ್ರವೇ ಸಹಸ್ರಾರ ಚಕ್ರವಾಗಿದೆ. ಶಕ್ತಿಯು ಶಿವನಲ್ಲಿ ಲೀನವಾಗುವ ಯೊಗ ಸ್ಥಳವೇ ಈ ಚಕ್ರವಾಗಿದೆ. ಮನಸ್ಸಿನ ಹಿಡಿಪು ಆಜ್ಞಾ ಚಕ್ರದಲ್ಲಿದೆ. ವಿಕಸನಾ ಮೂಲಧಾತು/ತತ್ವಗಳಾದ ಪಂಚಭೂತಗಳು ಚಕ್ರಗಳಲ್ಲಿ ಈ ಕೆಳಗಿನಂತೆ ಪ್ರತಿನಿಧಿತವಾಗುತ್ತವೆ,

      1. “ಆಕಾಶ”ವು ವಿಶುದ್ಧಿಯಲ್ಲಿ
      2. “ವಾಯು”ವು ಅನಾಹತದಲ್ಲಿ
      3. “ಅಗ್ನಿ”ಯು ಮಣೀಪೂರದಲ್ಲಿ
      4. “ಜಲ”ವು ಸ್ವಾಧಿಷ್ಠಾನದಲ್ಲಿ
      5. “ಪೃಥ್ವಿ”ಯು ಮೂಲಾಧಾರದಲ್ಲಿ

ಪಂಚಭೂತಗಳ ವ್ಯುತ್ಪತ್ತಿಯು ಈಗಾಗಲೇ ವಿವೃತವಾಗಿದೆ. ಸಹಸ್ರಾರದಿಂದ ಮೂಲಾಧಾರದ ವರೆಗೆ ವಿಶ್ವದ ಸಜೀವ ದ್ರವ್ಯದ ವಿಕಾಸವು- ಸೃಷ್ಟಿಯು ನಡೆಯುತ್ತದೆ. ವಿಶ್ವ ವಿಕಾಸ- ಸೃಷ್ಟಿಯೂ ಇದೇ ರೀತಿಯಲ್ಲಾಗುತ್ತದೆ. ಆದ್ದರಿಂದಲೇ ಭಗವದ್ಗೀತೆಯ ಹದಿನೈದನೆಯ ಅಧ್ಯಾಯದಲ್ಲಿ ಈ ಕ್ರಿಯೆಯು “ಬೇರು ಮೇಲೆ, ಗೆಲ್ಲುಗಳು ಕೆಳಗಾಗಿರುವ ಅಶ್ವತ್ಥ ವೃಕ್ಷವೆಂದು ವಿವೃತವಾಗಿದೆ (ಊರ್ಧ್ವಮೂಲಮಧಶ್ಶಾಖಮಶ್ವತ್ಥಮ್ ಪ್ರಾಹುರವ್ಯಯಂ| ಛಂದಾಂಸಿ ಯಸ್ಯ ಪರ್ಣಾನಿ ಯಸ್ತ್ವಮ್ ವೇದ ಸವೇದವಿತ್|| ). ಇದು “ಸೃಷ್ಟಿ”. ಇದಕ್ಕೆ ವಿರುದ್ಧವಾದುದು “ಸಂಹಾರ”.


13. ವಾಸ್ತುವು ನಮ್ಮ ಮೇಲೆ ಅಥವಾ ಒಂದು ಘಟಕ/ವ್ಯವಸ್ಥೆಯ ಮೇಲೆ ಹೇಗೆ ಕೆಲಸ ಮಾಡುತ್ತದೆ? ಪರಿಹಾರಗಳು ಇವೆಯೇ?

ಬಾಹ್ಯ ಮತ್ತು ಆಂತರಿಕ ಪ್ರಪಂಚಗಳೊಳಗೆ ಸಂಬಂಧವಿದೆಯೆಂದು ನಮಗೆ ತಿಳಿದಿದೆಯಷ್ಟೆ? ಇದುವೇ ವಾಸ್ತುವಿನಲ್ಲಿ ಸಕ್ರಿಯ ಅಂಶ. ನಾವು ಅಥವಾ ಘಟಕ/ವ್ಯವಸ್ಥೆಗಳು ಸ್ವತಂತ್ರವಲ್ಲವಾದ್ದರಿಂದ ಬಾಹ್ಯಪ್ರಪಂಚ (ಭೂಮ)ದ ಪ್ರಭಾವವು ಘಟಕ/ವ್ಯವಸ್ಥೆ ಅಥವಾ ನಮ್ಮ (ಸೂಕ್ಷ್ಮ) ಮೇಲಿರುತ್ತದೆ. ಸ್ಥಳದ ಪ್ರಭಾವವು ಘಟಕ/ವ್ಯವಸ್ಥೆಯ ಮೇಲಿರುತ್ತದೆ. ನಿರ್ದಿಷ್ಟವಾಗಿ ಹೇಳುವುದಾದರೆ ವ್ಯಕ್ತಿಗಳ ಮೇಲೆ ನೇರ ಪ್ರಭಾವವು ಇರುತ್ತದೆ. ಸ್ಥಳದ ಮತ್ತು ಅನುಸೃತ ನಿರ್ಮಾಣಗಳ ಪಾರಸ್ಪರಿಕ ಪ್ರಭಾವವು ಒಂದು ಘಟಕ/ವ್ಯವಸ್ಥೆಯ ಮೇಲಿರುವುದನ್ನು ಶಕ್ತಿ ತಳಹದಿಯ ವಾಸ್ತುಶಾಸ್ತ್ರವು ವಿವರಿಸುತ್ತದೆ. ಅದನ್ನನ್ವಯಿಸಿ ನಾವು ಘಟಕ/ವ್ಯವಸ್ಥೆಯ ಮೇಲಿರುವ ಬಾಹ್ಯ ಪ್ರಭಾವವನ್ನು ನಿಯಂತ್ರಿಸುವುದು, ಅನುಶ್ರುತಿಗೊಳಿಸುವುದು, ಪುನರ್ರೂಪೀಕರಿಸುವುದು ಮತ್ತು ಸರಿಯಾಗಿ ಬಳಸಿಕೊಳ್ಳುವುದನ್ನು ಮಾಡಬಹುದು. ನಾವು ಸ್ಥಳವೊಂದರ ಸಹಜವಾದ ಶಕ್ತಿ ಮತ್ತು ಸ್ಪಂದನ ಸ್ಥಿತಿಗಳನ್ನು ಸದುಪಯೋಗಿಸಿಕೊಳ್ಳಲು ಸಾಧ್ಯವಿದೆ. ಅಲ್ಲೇನಾದರೂ ಅನುಕೂಲವಲ್ಲದ ಸ್ಥಿತಿ ಇದ್ದರೆ ಪ್ರಸ್ತುತವಿರುವ ಘಟಕ/ವ್ಯವಸ್ಥೆಗಾಗಿ ನಿಯಂತ್ರಣ, ಬದಲಾವಣೆ ಮತ್ತು ರೂಪಾಂತರಗಳನ್ನು ಮಾಡಬಹುದು. ಇದಕ್ಕಾಗಿ ನಾವು ಶಕ್ತಿವಿಜ್ಞಾನಾಶ್ರಯಿತ ವಾಸ್ತುಶಾಸ್ತ್ರ ಮತ್ತು ಪರ್ಯಾಯ ಪರಿಹಾರ ವಿಧಾನಗಳನ್ನು ಅನ್ವಯಿಸಬೇಕಾಗುತ್ತದೆ. ದೋಷ ತರುತ್ತಿರುವ ವಾಸ್ತು ಸ್ಥಿತಿಗಳಿಗೆ ಶಕ್ತಿಯುತ ಪರ್ಯಾಯ ಪರಿಹಾರ ವಿಧಾನಗಳು ಇವೆ ಎನ್ನುವುದಿಲ್ಲಿ ಗಮನೀಯ.
360° ಗಳಷ್ಟಿರುವ ದಿಕ್ಕುಗಳನ್ನು ವಾಸ್ತುವಿನಲ್ಲಿ ಪರಿಗಣಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ಎಂಟು ಗುಂಪುಗಳಾಗಿಸಿ “ಅಷ್ಟದಿಕ್” ಗಳೆಂದು ಕರೆಯಲಾಗುತ್ತದೆ. ಒಂದುಸ್ಥಳದಲ್ಲಿ ಪ್ರತಿಯೊಂದು ದಿಕ್ಕಿನ ಸ್ವಭಾವ ಮತ್ತು ಪ್ರಭಾವಗಳು ಭಿನ್ನವಾಗಿರುತ್ತವೆ. ಪ್ರತಿಯೊಂದು ದಿಕ್ಕೂ ಸೂಕ್ಷ್ಮ ಘಟಕ/ವ್ಯವಸ್ಥೆಯ ಮೇಲೆ ಮೇಲೆವಿಭಿನ್ನವಾಗಿ ಪ್ರಭಾವ ಬೀರುತ್ತದೆ.
ಸ್ವಭಾವ ಮತ್ತು ಪ್ರಭಾವಗಳು ಅವಲಂಬಿಸುವುದು ಈ ಕೆಳಗಿನವುಗಳ ಮೇಲೆ-

      1. ಸಹಜವಾದ ಭೂ ಸ್ವರೂಪ [ಭೂವಾಸ್ತು]
      2. ಸ್ಥಳದ ನಿರ್ಮಾಣ/ಹರಡುವಿಕೆ [ಕ್ಷೇತ್ರವಾಸ್ತು]
      3. ಸ್ಥಳದಲ್ಲಿ ಪ್ರಧಾನ ನಿರ್ಮಾಣ/ಕಟ್ಟಡ [ಶಾಲಾವಾಸ್ತು]

ವ್ಯಕ್ತಿಯ[ಸೂಕ್ಷ್ಮದ] ಅಥವಾ ಘಟಕ/ವ್ಯವಸ್ಥೆಯ ಪಾಂಚಭೌತಿಕ ಶಕ್ತಿ ಮತ್ತು ಸ್ಪಂದನಗಳ ಮೇಲೆ ಈ ಮೇಲಿನ ಮೂರು ವಿಭಾಗಗಳ ಪಾಂಚಭೌತಿಕ ಶಕ್ತಿ ಮತ್ತು ಸ್ಪಂದನಗಳು ಪ್ರಭಾವಿಸುತ್ತವೆ. ಪ್ರತಿಕ್ಷಣವೂ ಬಾಹ್ಯ ಅಂಶಗಳು ನಮ್ಮ ಮೇಲೆ ಪ್ರಭಾವಿಸುತ್ತಿರುತ್ತವೆ. ವಾಸ್ತುವಿನ ಅಂಶವು ಒಂದು ಸ್ಥಿರಪ್ರಭಾವವಾಗಿದೆ. ಹೆಚ್ಚಿನೆಲ್ಲಾ ವಾಸ್ತುವಿನಂಶಗಳೂ ನಿಯಂತ್ರಣಸಾಧ್ಯವಾದವುಗಳಾದ್ದರಿಂದ, ವಾಸ್ತುಶಾಸ್ತ್ರ ಮತ್ತು ಶಕ್ತಿವಿಜ್ಞಾನಾಧಾರಿತ ಪರಿಹಾರಗಳನ್ನು ಅಳವಡಿಸುವುದು ಆ ಮಟ್ಟದವರೆಗೆ ಸದಾ ಫಲಕಾರಿಯಾಗಿರುತ್ತದೆ. ವಾಸ್ತುಸ್ಥಿತಿಯೇ ಏಕೈಕ ಪ್ರಭಾವೀ ಅಂಶವಲ್ಲದಿದ್ದರೂ, ಅದು ನಮಗೆ ನಿಯಂತ್ರಿಸಲು ಸಾಧ್ಯವಿರುವ ಜೀವನದ ಅತ್ಯಂತ ಪ್ರಧಾನವಾದ ವಿಭಾಗವಾಗಿದೆ. ಇದರಿಂದ ನಾವು ದುಷ್ಪರಿಣಾಮಗಳನ್ನು ತಗ್ಗಿಸಬಹುದು ಮತ್ತು ಸತ್ಪರಿಣಾಮಗಳನ್ನು ಉದ್ದೀಪಿಸಬಹುದು. ಉತ್ತಮ ಮತ್ತು ಸೂಕ್ತ ವಾಸ್ತುವು ವಾಸ್ತ್ವೇತರ ವಿಭಾಗಕ್ಕೊಳಪಡುವ ದುಷ್ಪ್ರಭಾವಗಳ ತಗ್ಗಿಸುವಿಕೆ ಮತ್ತು ಸತ್ಪ್ರಭಾವಗಳ ಹೆಚ್ಚಿಸುವಿಕೆಗಳನ್ನು ಬೆಂಬಲಿಸುತ್ತದೆ.


14. ಒಂದು ಘಟಕ/ವ್ಯವಸ್ಥೆ/ನಮ್ಮ ಮೇಲೆ ವಾಸ್ತುವಿನ ಪರಿಣಾಮ ಎಷ್ಟು? ಅನ್ಯ ಪ್ರಮುಖ ವಿಭಾಗಗಳು ಯಾವುವು? ನಾನು ಯಾಕೆ ಸ್ಥಳವೊಂದರ ವಾಸ್ತು ಮತ್ತು ಶಕ್ತಿಗಳ ಬಗ್ಗೆ ಒತ್ತಾಯಿಸುತ್ತೇನೆ? ಅದು ಅತ್ಯಂತ ಪ್ರಮುಖವೇ?

ಸರ್ವೇಸಾಮಾನ್ಯವಾಗಿ ನಾವು ಹೀಗೆ ಹೇಳಬಹುದು,

      1. ನಾವು ನೆಲೆನಿಂತಿರುವ ಸ್ಥಳದಲ್ಲಿರುವ ವಾಸ್ತು ಮತ್ತು ಅನ್ಯ ಶಕ್ತಿ-ಸ್ಪಂದನಗಳ ಪ್ರಭಾವವು ಪೂರ್ಣ ಜೀವನದ ಮೂರರೊಲ್ಲೊಂದು ಭಾಗಕ್ಕಿದೆ.
      2. ಜಾತಕ ಕುಂಡಲಿಯಲ್ಲಿ ಸಂಸೂಚಿತವಾಗುವ ಪೂರ್ವಜನ್ಮ ಅಥವಾ ವಿಶ್ವದ ನಿರ್ವಚನವು ಮೂರರಲ್ಲೊಂದು ಭಾಗದಲ್ಲಿ ಪ್ರಭಾವ ಬೀರುತ್ತದೆ.
      3. ಮೂರರೊಲ್ಲೊಂದು ಭಾಗವು ವರ್ತಮಾನದ ಕರ್ಮ  “ಪ್ರಯತ್ನ”, ವಿವಿಧ ವ್ಯಕ್ತಿಗಳು ಮತ್ತು ಉದ್ಯೋಗದ ಸ್ವಭಾವ ಇತ್ಯಾದಿಗಳೊಂದಿಗೆ ಇರುವ ಪಾರಸ್ಪರಿಕ ಸಂಪರ್ಕ- ಸಂಬಂಧಗಳಿಂದ ಪ್ರಭಾವಿತಗೊಳ್ಳುತ್ತದೆ.

ಈ ಶೇಕಡಾವಾರು ವಿಭಾಗೀಕರಣಕ್ಕೆ ನಿಜವಾಗಿ ಪೂರ್ಣಾರ್ಥವಿಲ್ಲ; ಯಾಕೆಂದರೆ, ಒಂದು ವಿಭಾಗದಲ್ಲಿರುವ ಒಂದು ಪ್ರಧಾನ ನ್ಯೂನತೆಯು ಅಥವಾ ಪ್ರಬಲತೆಯು ಪೂರ್ಣವಾಗಿ ಹಾಳುಗೆಡವಬಹುದು ಅಥವಾ ಉನ್ನತೀಕರಿಸಬಹುದು; ಮತ್ತು ಅದಕ್ಕೆ ಉಳಿದ ವಿಭಾಗಗಳನ್ನು ನಿಯಂತ್ರಿಸುವ ಮತ್ತು ಪ್ರಭಾವಿಸುವ ಶಕ್ತಿ ಇರುತ್ತದೆ (ಧನಾತ್ಮಕವಾಗಿಯೂ ಋಣಾತ್ಮಕವಾಗಿಯೂ).
ನಾವು ಗರಿಷ್ಠವಾಗಿ ನಿಯಂತ್ರಿಸಬಹುದಾದ ಮತ್ತು ಸದುಪಯೋಗಪಡಿಸಬಹುದಾದ ಭಾಗವು ಸ್ಥಳದ ವಾಸ್ತು ಮತ್ತು ಶಕ್ತಿಸ್ಥಿತಿಯಾಗಿದೆ. ಪ್ರತಿಕ್ಷಣವೂ ನಮ್ಮ ಮೇಲೆ ವಾಸ ಅಥವಾ ಉದ್ಯೋಗ ಸ್ಥಳದ ಪ್ರಭಾವವು ಆಗುತ್ತಲೇ ಇರುತ್ತದೆ ಎನ್ನುವುದನ್ನು ಗಮನಿಸಿರಿ. ಅದು ಸ್ಥಿರವಾದ ಪ್ರಭಾವವಾಗಿದೆ. ವಾಸ್ತುವಿಗೆ ನಮ್ಮ ಬುದ್ಧಿ,ಸಂಪತ್ತು ಮತ್ತೆಲ್ಲದರ ಮೇಲೂ ಒಳಿತು ಅಥವಾ ಕೆಡುಕನ್ನು ಉಂಟುಮಾಡುವ ಸಾಮರ್ಥ್ಯವಿದೆ. ವಿವೇಕಿಯು ಅದನ್ನು ಯಾವತ್ತೂ ತನ್ನಾವಶ್ಯಕತೆಗೆ ತಕ್ಕಂತೆ ಶ್ರುತಿಗೊಳಿಸಿಕೊಳ್ಳುವನು. ಆದ್ದರಿಂದ ವಾಸ್ತು ಮತ್ತು ಶಕ್ತಿಸ್ಥಿತಿಯನ್ನು ಉತ್ತಮ ಮತ್ತು ಯುಕ್ತ ರೀತಿಯಲ್ಲಿ ಇಟ್ಟುಕೊಳ್ಳಬೇಕೆಂದು ನಾನು ಬಲವಾಗಿ ಸಲಹೆ ಕೊಡುತ್ತೇನೆ. ಸರ್ವೇಸಾಮಾನ್ಯವಾಗಿ ಉಳಿದ ವಿಭಾಗಗಳ ನಿಯಂತ್ರಣ ಮತ್ತು ಸದುಪಯೋಗವು ಪ್ರಮಾಣದಲ್ಲಿ ಕಡಿಮೆ ಮತ್ತು ಹೆಚ್ಚು ಕಷ್ಟಗಳಿಂದ ಕೂಡಿರುತ್ತದೆ.


15. ವಾಸ್ತುವಿಗೆ ಹೊರತಾದ ಅನ್ಯ ಶಕ್ತಿ ಮತ್ತು ಸ್ಪಂದನ ಪ್ರಭಾವಗಳು ಯಾವುವು?

      1. ಘಟಕ/ವ್ಯವಸ್ಥೆ/ನಮ್ಮ ಮೇಲೆ ಸ್ಥಳದಲ್ಲಿರುವ ಸಹಜ ಶಕ್ತಿಗಳು ಪ್ರಭಾವ ಬೀರುತ್ತವೆ. “ನಾಗ”, ಇತರ “ಸಾತ್ವಿಕ”, “ರಾಜಸಿಕ” ಮತ್ತು “ತಾಮಸಿಕ” ಶಕ್ತಿಗಳೆಲ್ಲಾ ಈ ವರ್ಗಕ್ಕೊಳಪಡುತ್ತವೆ. ಹಲವು ಶಕ್ತಿ ಕೇಂದ್ರಗಳಲ್ಲಿ ದೇವಾಲಯಗಳು/ಆರಾಧನಾ ಸ್ಥಳಗಳು ಇರುವುದು ಭಾರತದಲ್ಲಿ ಮತ್ತು ಜಗತ್ತಿನ ಕೆಲವು ಅನ್ಯ ಸ್ಥಳಗಳಲ್ಲಿ ಕಂಡುಬರುತ್ತದೆ. ಸಾಮನ್ಯವಾಗಿ ಭಾರತದಲ್ಲಿ ಅವುಗಳು ಗುರುತಿಸಲ್ಪಟ್ಟು ಆರಾಧಿಸಲ್ಪಡುತ್ತವೆ (ಮನೋನಿಗದಿತವಾಗುತ್ತವೆ); ವಿರಳವಾಗಿ ಜಗತ್ತಿನ ಅನ್ಯ ಭಾಗಗಳಲ್ಲೂ. ಈ ಶಕ್ತಿಕೇಂದ್ರಗಳು ಆರಾಧನಾ ತಂತ್ರಜ್ಞಾನದ ಮೂಲಕ ನಿಯಂತ್ರಿತವಾಗುತ್ತವೆ ಮತ್ತು ಸದುಪಯೋಗಗೊಳ್ಳುತ್ತವೆ. ಪರಿಣಾಮಕಾರಿಯಾದ ಇನ್ನೂ ಅನ್ಯ ಶಕ್ತಿಸ್ವರೂಪಗಳು ಇವೆ. ಅವೆಂದರೆ – ಭೂಮಿಯ ಕಾಂತೀಯ ಕ್ಷೇತ್ರ, ಭೂಯೋನಿ ಪ್ರಭಾವ, ಗುಹಾ ಪ್ರಭಾವ, ಅಂತರ್ಜಲಸೃತಿ ಪ್ರಭಾವ, ಗೋಪುರ ಪ್ರಭಾವ, ಕರ್ರಿ ಗ್ರಿಡ್, ಇತ್ಯಾದಿ. ಈ ಶಕ್ತಿಗಳನ್ನು ನಿಯಂತ್ರಿಸಲು ಮತ್ತು ಉಪಯೋಗಿಸಲು ಹತ್ತು ಹಲವು ತಂತ್ರಗಳಿವೆ.
      2. ಮನುಷ್ಯ ಮನಸ್ಸಿನ ಮೂಲಕ ಕೇಂದ್ರೀಕೃತವಾಗುವ ಉಪಯುಕ್ತ ಶಕ್ತಿ ಮತ್ತು ಸ್ಪಂದನಗಳು ಹಲವಿವೆ. ಕೆಲವು ಆರಾಧನೆ ಮತ್ತು ತನ್ಮೂಲಕ ಅಭಿವೃದ್ದಿಗಾಗಿ ಮನುಷ್ಯ ಮನಸ್ಸಿನಿಂದ ಕೇಂದ್ರೀಕೃತವಾದವುಗಳಾಗಿವೆ. ಇನ್ನು ಹಲವು ಕೇಂದ್ರೀಕೃತವಾಗದಿದ್ದರೂ ಮನುಜ ಮನದ ಕಾರಣದಿಂದ ವಿಸ್ತಾರವಾಗಿ ಸಂಕಲಿತವಾದವುಗಳಾಗಿವೆ. ಅವುಗಳಲ್ಲಿ ಕೆಲವು – ಎಲ್ಲ ರೀತಿಯ ಧನಾತ್ಮಕ ಉಪಾಸನೋದ್ದೇಶದಲ್ಲಿ ಕೇಂದ್ರೀಕೃತವಾದವುಗಳು ಮತ್ತು ಎಲ್ಲ ಧನಾತ್ಮಕ ಮನೋಸ್ಪಂದನಗಳು ಇತ್ಯಾದಿಗಳು. ನಾಣ್ಯದ ಇನ್ನೊಂದು ಮುಖವು ಹಾನಿಕಾರಕವಾದದ್ದು. ಮನುಷ್ಯ ಮನಸ್ಸಿನ ಮೂಲಕ ಕೇಂದ್ರೀಕೃತವಾದ ಹಾನಿಕಾರಕವಾದ ಶಕ್ತಿ ಸ್ಪಂದನಗಳು ಇರಲು ಸಾಧ್ಯವಿದೆ. ಕೆಲವೆಂದರೆ- ಪ್ರೇತ, ರಕ್ಷಸ್ಸು, ವಾಮ ದುರಾಚಾರದ ಶಕ್ತಿಗಳು, ಎಲ್ಲಾ ರೀತಿಯ ಋಣಾತ್ಮಕ ಮನೋಸ್ಪಂದನಗಳು ಇತ್ಯಾದಿ.
      3. ಪ್ರತಿಯೊಂದು ಮನುಷ್ಯೇತರ ಸಜೀವ ಪದಾರ್ಥ [ಆಹಾರ, ಸೂಕ್ಷ್ಮಾಣುಜೀವಿಗಳು, ಸಸ್ಯಗಳು, ಪ್ರಾಣಿಗಳು ಇತ್ಯಾದಿ] ಮತ್ತು ನಿರ್ಜೀವ ಪದಾರ್ಥಗಳೂ ತಮ್ಮದೇ ಶಕ್ತಿ ಮತ್ತು ಸ್ಪಂದನಗಳನ್ನು ಹೊಂದಿರುತ್ತವೆ. ಅವುಗಳೊಂದಿಗೆ ಇರುವ ಪಾರಸ್ಪರಿಕ ಸಂಬಂಧ- ಪ್ರಭಾವಗಳು ಘಟಕ/ವ್ಯವಸ್ಥೆ/ನಮ್ಮ ಮೇಲೆ ಪರಿಣಾಮ ಬೀರುತ್ತವೆ.
      4. ಮನುಷ್ಯರ ಪರಸ್ಪರ ಸಂಬಂಧ- ಪ್ರಭಾವಗಳ ಹಿಂದಿರುವ ಶಕ್ತಿ ಮತ್ತು ಸ್ಪಂದನಗಳು ಘಟಕ/ವ್ಯವಸ್ಥೆ/ನಮ್ಮ ಮೇಲೆ ಪರಿಣಾಮ ಬೀರುತ್ತವೆ.
      5. ನಮ್ಮ ಉದ್ಯೋಗದ ಸ್ವರೂಪ, ಪ್ರಯತ್ನ [ಶಾರೀರಿಕ ಮತ್ತು ಮಾನಸಿಕ] ಇತ್ಯಾದಿಗಳ ಹಿಂದಿರುವ ಶಕ್ತಿ ಸ್ಪಂದನಗಳು ಪರಿಣಾಮ ಬೀರುತ್ತವೆ.
      6. ಋತುಗಳು, ಭೂಕಂಪಗಳು, ಉಷ್ಣತೆ, ಚಳಿ, ಬಾಹ್ಯಾಕಾಶೀಯ ವಿದ್ಯಮಾನಗಳು, ಮುಂತಾದ ಸಹಜವೂ ಸಾರ್ವತ್ರಿಕವೂ ಆದಂತಹ ಪ್ರಾಕೃತಿಕ ವಿದ್ಯಮಾನಗಳು ಪ್ರಭಾವಿಗಳಾಗಿ ಆಳುತ್ತವೆ.
      7. ಭಾರತೀಯ ಸಾಂಪ್ರದಾಯಿಕ ಜ್ಯೋತಿಷ್ಯದ ಜಾತಕ ಕುಂಡಲಿ ಮತ್ತು ಪ್ರಶ್ನಮಾರ್ಗದ ವಿಧಾನ ಮೂಲಕ ಸೂಚಿತವಾಗುವ ವ್ಯಕ್ತಿಗತವಾಗಿ ಇರುವ ವಿಶ್ವಪ್ರಭಾವಗಳ ಹಿಂದಿರುವ ಶಕ್ತಿ ಮತ್ತು ಸ್ಪಂದನಗಳು. ಸಾಂಪ್ರದಾಯಿಕ ಜ್ಯೋತಿಷ್ಯವಲ್ಲದೇ ಇನ್ನೂ ಹಲವಾರು ವಿಧಾನಗಳ ಮೂಲಕವೂ ವ್ಯಕ್ತಿಯ ಮತ್ತು ವ್ಯಕ್ತಿಗಾಗಿರುವ ನೈಜಾಂಶಗಳನ್ನು ತಿಳಿಯಬಹುದು.
      8. ಮೇಲೆ ಉಕ್ತವಾದ ಎಲ್ಲದಕ್ಕೂ ಕಿರೀಟಪ್ರಾಯವಾಗಿ ಇರುವಂಥಾದ್ದು ವೈಯುಕ್ತಿಕ “ಮನಸ್ಸು”= ಆಲೋಚನೆ, ಧೋರಣೆ (ಮನೋಭಾವ), “ಗುಣ” (ಸತ್ವ, ರಜ, ತಮ), ಸ್ಥಿರತೆ ಇತ್ಯಾದಿಗಳು ಅತೀ ಪ್ರಮುಖಪಟ್ಟಂತವುಗಳು. ಶಕ್ತಿಯೊಂದಿಗೆ ಮನಸ್ಸಿನ ಒಂದು ಮೂಲವಿಜ್ಞಾನವೇನೆಂದರೆ- “ಶಕ್ತಿಯು ಮನೋನುಸಾರಿಯಾಗಿದೆ”. ಇನ್ನೊಂದು ಮುಖವೆಂದರೆ- “ಮನಸ್ಸು ಎನ್ನುವುದು ಶಕ್ತಿ ಮತ್ತು ಸ್ಪಂದನಗಳ ಸಂಸೂಚಕವಾಗಿದೆ”.

ಯೋಚನಾ ಸ್ಥಿರತೆ, ಯೋಚನಾ ವಿಷಯ ಇತ್ಯಾದಿಗಳು ಇತರ ಆಳ್ವಿಕಾಂಶಗಳು. ಈ ಮೇಲೆ ಹೇಳಿದ ಅಂಶಗಳನ್ನು[A ಇಂದ H] ಮೂರಾಗಿ ಪುನರ್ವಿಂಗಡಿಸಬಹುದು. ಹೇಗೆಂದರೆ,

      1. ಭೌತಿಕ [ಆಧಿಭೌತಿಕ]
      2. ದೈವಿಕ [ಆಧಿದೈವಿಕ]
      3. ಆತ್ಮಿಕ [ಆಧ್ಯಾತ್ಮಿಕ]

ಎಲ್ಲಾ ವಿಭಾಗಗಳಲ್ಲಿ ಸದಾ “ಶಾಂತಿ” [ಪೂರ್ಣವಾದ ದಿವ್ಯ- ಸಮಾಧಾನ, ಸಾಮರಸ್ಯ, ಪೂರ್ಣತೆ, ತೃಪ್ತಿ] ಇರುವುದು ಯಾವತ್ತೂ ಆಶಿತವಾದುದು. ನಿಯತವಾಗಿ ಸಮನ್ವಯಿತವಾದ ಜೀವನದ ಉತ್ತಮಿಕೆಯನ್ನು ಸಾಧಿಸಲು, ಈ ಎಲ್ಲಾ ವಿಭಾಗಗಳೂ ಸದಾಕಾರದಲ್ಲಿ ಮತ್ತು ಶಾಂತಿಯಲ್ಲಿ ಇರಬೇಕು.


16. ಜೀವನದ ಬಗ್ಗೆ ಪೂರ್ಣ ತಿಳುವಳಿಕೆ ಮತ್ತು ವಿಜ್ಞಾನದ ಅಳವಡಿಕೆ.

 

ಒಟ್ಟಾಗಿ ನೋಡುವಾಗ ಆದ್ಯಂತವಾಗಿ ಪರಿಣಾಮಕಾರಿಯಾದ, ನಿಯಂತ್ರಕವಾದ ಮತ್ತು ನಿರ್ದೇಶಕವಾದ ಶಕ್ತಿ ಮತ್ತು ಸ್ಪಂದನವು ಮೇಲೆ ಹೇಳಿದ ಎಂಟು ವಿಭಾಗಗಳು [A ಇಂದ H] ಮತ್ತು ವಾಸ್ತುವಾಗಿವೆ. ಈ ಎಲ್ಲಾ ವಿಭಾಗಗಳ ಬಗ್ಗೆ ಸರಿಯಾದ ಅನುಭವಪೂರ್ಣ ಜ್ಞಾನ ಮತ್ತವುಗಳ ಪರಸ್ಪರ ಸಂಬಂಧ- ವಿಜ್ಞಾನದ ಬೇರಿನೊಂದಿಗೆ ಸರಿಯಾದ ಅಳವಡಿಕೆಗಳು ಫಲಪ್ರದವಾಗಿರುತ್ತವೆ.


17. ಸಲಹಾಕಾರನು ಏನು ಮಾಡಬೇಕು?

ಸಲಹಾಕಾರನು ಮೇಲೆ ಹೇಳಿದವುಗಳೆಲ್ಲವನ್ನು ಅರ್ಥವಿಸಿರಬೇಕು. ಅವನು ಸಲಹಾರ್ಥಿಗಳ ಇತಿಮಿತಿ ಮತ್ತು ಆವಶ್ಯಕತೆಗಳನ್ನು ಗಮನದಲ್ಲಿಟ್ಟು ಮಾರ್ಗದರ್ಶನ ಮಾಡಬೇಕು. ಸಲಹಾಕಾರನು ಸನ್ನಿವೇಶವೊಂದನ್ನು ತೆಗೆದುಕೊಂಡಾಗ ಅವನೆಲ್ಲಾ ಶಕ್ತಿ ಸಂಬಂಧಗಳನ್ನೂ ಗ್ರಹಿಸಬೇಕು.
ಯಾವುದೇ ಭೌತಿಕ ವಾಸ್ತುಸ್ಥಿತಿಯಲ್ಲೂ ತಪ್ಪು ಎಂದು ಇಲ್ಲ. ಏಕೈಕ ಅಂಶವೆಂದರೆ ಆ ಸ್ಥಿತಿಯು ವೈಯುಕ್ತಿಕ/ಸಾಂಸ್ಥಿಕ ವ್ಯವಸ್ಥೆಯನ್ನು ಹೇಗೆ ಪ್ರಭಾವಿಸುತ್ತದೆ ಮತ್ತು ಆತ/ಅವರು ಆ ಶಕ್ತಿ ಹಾಗೂ ಸ್ಪಂದನಗಳನ್ನು ಹೇಗೆ ರೂಪಾಂತರಿಸಿ ವಿನಿಯೋಗಿಸುತ್ತಿದ್ದಾರೆ ಎನ್ನುವುದಾಗಿದೆ. ಯಾರಿಗಾಗಿ ಸಲಹೆ ಮತ್ತು ಪರಿಹಾರಗಳು ನಿಯುಕ್ತವಾಗಿವೆ ಎನ್ನುವುದು ಅತೀ ಪ್ರಮುಖವಾದುದಾಗಿದೆ.
ಸಾಂಪ್ರದಾಯಿಕ ಆಗಮಾಧಾರಿತ ವಾಸ್ತು ಗ್ರಂಥಗಳು ದಿಕ್ಕು- ಚತುರ್ವರ್ಣ ಮತ್ತು ಯೋನಿ(ಆಯಾದಿ)-ಚತುರ್ವರ್ಣಗಳ ಬಗ್ಗೆ ಹೇಳುವುದನ್ನು ಹಲವರು ಗಮನಿಸಿರಲೂಬಹುದು. ಹಾಗೆ, ವ್ಯಕ್ತಿಯ/ಸಂಸ್ಥೆಯ ‘’ಗುಣ-ಕರ್ಮ’’ಗಳು ಬಹು ಮುಖ್ಯವಾಗಿವೆ. ಪ್ರತಿಯೊಂದು ವಿಕಸನಾ ಮೂಲತತ್ವವೂ ಪ್ರತೀ ದಿಕ್ಕಿನ ಮೇಲೂ ತನ್ನದೇ ಆದ ಪ್ರಭಾವವನ್ನು ಹೊಂದಿರುತ್ತದೆ, ಆದರೆ ಮನುಷ್ಯನ ಮೇಲೆ ಪರಿಣಾಮವು ತತ್ತದನುಸಾರವಾಗಿ ವ್ಯತ್ಯಸ್ತವಾಗಿರುತ್ತದೆ.

ಕೆಲವೊಮ್ಮೆ ಉದ್ಯೋಗಕ್ಕೆ ಹೊಂದುವ ವಾಸ್ತುವು ವ್ಯಕ್ತಿಗೆ ಹೊಂದಿಕೆಯಾಗದಿರಬಹುದು. ಅಂತಹ ಪ್ರಕರಣಗಳಲ್ಲಿ ಅದು ಚಾತುರ್ಯದ ವಿಷಯವಾಗಿರುತ್ತದೆ; ಇಲ್ಲಿ ಶಕ್ತಿವಿಜ್ಞಾನದ ಅರಿವು ಮತ್ತದರ ಅನ್ವಯವು ಮುಖ್ಯವಾಗಿದೆ. ಉದಾಹರಣೆಗೆ;

        1. ಹೋಟೆಲ್ ಗಳಲ್ಲಿ ಅಗ್ನಿತತ್ವವು ತುಂಬಾ ಮುಖ್ಯ. ಅದರ ಮಾಲಿಕನಿಗೆ ಸಾಕಷ್ಟು ಜಲತತ್ವದ ಬಲವಿಲ್ಲದಿದ್ದರೆ ಆತ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದೀತು. ಈ ಸ್ಥಿತಿಯಲ್ಲಿಯೂ ಪರಿಹಾರವು ಸಾಧ್ಯವಿದೆ.
        2. ಮನೆಯೊಂದರ ಬಾಗಿಲೊಂದು ನೈಋತ್ಯದಲ್ಲಿದೆ ಎಂದುಕೊಳ್ಳಿ. ಆ ಮನೆಯ ಜೀವನಾಧಾರವು ಸದಸ್ಯನೊಬ್ಬನ ವಿದೇಶೀ ಉದ್ಯೊಗದಿಂದಿರುವುದಾದರೆ ನೀವು ಆ ಬಾಗಿಲನ್ನು ಮುಚ್ಚಿ ಬದಲಾಯಿಸಲಾಗದು, ಅದೇ ರೀತಿ ಹಲವಾರು ರೀತಿಯ ಪರಿಹಾರೋಪಾಯಗಳೂ ಜೀವನಾಧಾರವನ್ನು ಅಲುಗಾಡಿಸಬಹುದು. ಸೂಕ್ತವಾದ ಪರಿಹಾರೋಪಾಯದ ಆಯ್ಕೆಯು ಇಲ್ಲಿ ಮುಖ್ಯವಾಗಿರುತ್ತದೆ.

ಅವಶ್ಯ ಬಿದ್ದರೆ ವ್ಯಕ್ತಿಯ ವೈಯಕ್ತಿಕ ಶಕ್ತಿಸ್ಥಿತಿಯನ್ನು ಅಧ್ಯಯನ ಮಾಡಿ ಸೂಕ್ತ ಪರಿಹಾರಗಳನ್ನು ಸೂಚಿಸುವುದು ಮತ್ತು ತಾನು ಮಾಡಬೇಕಾದ ಪರಿಹಾರಗಳನ್ನು ಮಾಡಬೇಕಾಗಿ ಬಂದೀತು. ಸಲಹಾಕಾಂಕ್ಷಿಯ-ವ್ಯಕ್ತಿಯ ಮತ್ತು ಉದ್ದೇಶಿತ ಕಾರ್ಯದ ಶಕ್ತಿಸ್ಥಿತಿಗಳು ಪರಸ್ಪರ ಹೊಂದಿಕೊಳ್ಳಬೇಕು.
ಒಬ್ಬ ಸಲಹಾಕಾರನು ಕೇವಲ ವಾಸ್ತು ತಜ್ಞನಾಗಿಯೋ, ಕೇವಲ ಜ್ಯೋತಿಷಿಯಾಗಿಯೋ ಉಳಿಯಬಾರದು, ಆತನು ಒಬ್ಬ ಪೂರ್ಣ ಶಕ್ತಿವಿಜ್ಞಾನಿ, ಶಕ್ತಿತಂತ್ರಜ್ಞ ಮತ್ತು ವಿನ್ಯಾಸಕಾರನಾಗಿರಬೇಕು. ಅಲ್ಲದಿದ್ದರೆ ಆತನು ಸಲಹಾಕಾಂಕ್ಷಿಗೆ ತೊಂದರೆಗಳನ್ನು ತರಬಹುದು.


18. ಆತ್ಯಂತಿಕ ಸತ್ಯ: ಶ್ರೀ ರಮಣ ಮಹರ್ಷಿಗಳು ಹೀಗೆಂದಿದ್ದಾರೆ.

“ಪ್ರಜ್ಞೆ ಮತ್ತು ಪ್ರಪಂಚಗಳು ಒಟ್ಟಿಗೇ ಪ್ರಕಟ ಮತ್ತು ಅಗೋಚರಗೊಳ್ಳುತ್ತವಾದರೂ ಪ್ರಪಂಚದ ಪ್ರಕಾಶ ಅಥವಾ ಅದರ ಪರಿವೀಕ್ಷಣೆಯು ಪ್ರಜ್ಞೆಯಿಂದ ಮಾತ್ರ ನಡೆಯುವಂಥಾದ್ದು. ಇವೆರಡರ ಹುಟ್ಟಿನ ಮತ್ತು ಅದೃಶ್ಯದ; ಯಾವುದು ಸ್ವತ: ಪ್ರಕಟಗೊಳ್ಳುವುದೋ ಅದೃಶ್ಯಗೊಳ್ಳುವುದೋ ಆಗುವುದಿಲ್ಲವೋ ಅಂತಹ ಮೂಲವೇ ಪರಿಶುದ್ಧ ಪೂರ್ಣ ಸತ್ಯವಾಗಿದೆ.

ಶಕ್ತಿಯುಶಿವನೊಂದಿಗೆ (ಬ್ರಹ್ಮಾಂಡಪ್ರಜ್ಞೆಯೋದಿಗೆ) ಸೇರುವ; ಹಾಗೆ, ಏಕವಾಗುವ ಆ ಶರೀರವು ಆನಂದಮಯ ಕೋಶವಾಗಿದೆ. ಇಲ್ಲಿಪಿಂಡಾಂಡವೇಬ್ರಹ್ಮಾಂಡ; ಹಾಗೆ ಪಿಂಡಾಂಡಕ್ಕೆ ಅರಿವಾಗುತ್ತದೆ.

ಶಬ್ದಕೋಶ:

ಪಂಚಭೂತಗಳು : ಪಂಚಭೂತಗಳೆಂದರೆ ಮನುಜನಿಗನ್ವಯಿಸಿ ವರ್ತಮಾನ ಸ್ಥಿತಿಯಲ್ಲಿರುವ ಪ್ರಪಂಚದ- ಬ್ರಹ್ಮಾಂಡದ ವಿಕಸನಾತ್ಮಕ ಮೂಲಧಾತುಗಳು. ಮನುಷ್ಯನು ಅಥವಾ ಪಿಂಡಾಂಡವು ಕೂಡಾ ಪಂಚಭೂತಗಳನ್ನೇ ಘಟಕಗಳಾಗಿ ಹೊಂದಿವೆ. ಇನ್ನೂ ಹೆಚ್ಚು

ಪಿಂಡಾಂಡ : ಬ್ರಹ್ಮಾಂಡದ ಇಳಿ ಅಳತೆಯ ಮೂಲವೇ ಆದ ಘಟಕ- ಮನುಷ್ಯನನ್ನು ಹಾಗೆನ್ನುತ್ತಾರೆ, ಯಾಕೆಂದರೆ ಬ್ರಹ್ಮಾಂಡದಲ್ಲಿರುವ ಎಲ್ಲವೂ ಪಿಂಡಾಂಡದಲ್ಲಿದೆ. ಆತ್ಯಂತಿಕವಾಗಿ ಎರಡೂ ಒಂದೇ. ಇನ್ನೂ ಹೆಚ್ಚು

ಬ್ರಹ್ಮಾಂಡ : ಎಲ್ಲಾ ದೃಷ್ಟಿಗಳಿಂದಲೂ ಆಯಾಮಗಳಿಂದಲೂ ಸಂಪೂರ್ಣವಾದ ಅನಂತವಾಗಿ ಮೊಟ್ಟೆಯಂತಿರುವ ಪೂರ್ಣ ವಿಶ್ವ. ಇನ್ನೂ ಹೆಚ್ಚು

ಪ್ರಕೃತಿ: ಪ್ರಾಕೃತಿಕ ಪರಿಸರ ಮತ್ತು ವಿಶ್ವ.

ಋಷಿಗಳು : ಈ ವಿಶ್ವದ ತಿರುಳಿನ ಜ್ಞಾನವನ್ನು – ಸತ್ಯವನ್ನು ವಿಶ್ವದಿಂದಲೇ ನೇರವಾಗಿ ಪಡೆದುಕೊಂಡ ದೈವಿಕ ವ್ಯಕ್ತಿಗಳು.

ಶಾಸ್ತ್ರಗಳು : ವಿಚಾರ ಮತ್ತುಆಚಾರಗಳ ಬಗ್ಗೆ ಇರುವ; ಪರಸ್ಪರ ಸಂಬಂಧಗಳಿರುವ ವಿವಿಧ ಗ್ರಂಥಗಳ ಗುಂಪುಗಳು.

ವೇದ : ನಿಗಮ ಇನ್ನೂ ಹೆಚ್ಚು

ವೇದಾಂಗ : ಇನ್ನೂ ಹೆಚ್ಚು

ಶಿಲ್ಪ  : ಶಿಲ್ಪವು ಮೂರ್ತಿ ನಿರ್ಮಾಣ ಮತ್ತು ಸಂಬಂಧಿತ ಕಟ್ಟಡ ನಿರ್ಮಾಣ ವಿಜ್ಞಾನವಾಗಿದೆ. ಇದು ಆಗಮ ಮತ್ತು ವಾಸ್ತು ಶಾಸ್ತ್ರಗಳ ಅಂಗವೂ ಆಗಿದೆ. ಇನ್ನೂ ಹೆಚ್ಚು

ಆಗಮಗಳು : ಇನ್ನೂ ಹೆಚ್ಚು

ದರ್ಶನಗಳು: ಇನ್ನೂ ಹೆಚ್ಚು

ಗುರುಗಳು : ದೈವಿಕವಾಗಿ ಅನುಗ್ರಹೀತರಾದ ವ್ಯಕ್ತಿ ಮತ್ತು ಶ್ರೇಷ್ಠ ಯೋಗಿವಿಜ್ಞಾನಿಗಳಾದ ಗುರುವರ್ಯರೊಬ್ಬರ ಶಿಷ್ಯ.

ಪರಮಗುರುಗಳು: ಆತ್ಯಂತಿಕ ಯೌಗಿಕ ಸ್ಥಿತಿಯನ್ನು ಹೋದಿದ ಒಬ್ಬ ಶ್ರೇಷ್ಠರಾದ ಯೋಗಿವಿಜ್ಞಾನಿ. ಅವರೀಗ ಹಿಮಾಲಯದಲ್ಲೆಲ್ಲೋ ಇದಾರೆ ಎಂದು ನಾವು ನಂಬಿರುತ್ತೇವೆ.

ಭಗವದ್ಗೀತೆ: ಭಗವದ್ಗೀತೆಯು ಶ್ರೇಷ್ಠತಮ ಇತಿಹಾಸವಾದ ಮಹಾಭಾರತದ ಒಂದು ಭಾಗ

ಶಿಕ್ಷಾ: ಉಚ್ಛಾರಣೆಯ, ಅಕ್ಷರಗಳ, ಶಬ್ದಗಳ, ವಾಕ್ಯಗಳ ವಿಜ್ಞಾನ.

ವ್ಯಾಕರಣಂ : ವ್ಯಾಕರಣ, ವೇದಗಳ ವಿಶೇಷ ವ್ಯಾಕರಣ ಮತ್ತು ಸಂಬಂಧಿತ ವಿಷಯಗಳು.

ಛಂದಃ : ಛಂದಸ್ಸು ಮತ್ತು ಸಂಬಂಧಿತ ವಿಷಯಗಳು- ವಿಶೇಷವಾಗಿ ವೇದಗಳದ್ದು.

ನಿರುಕ್ತಂ : ನಿರ್ದಿಷ್ಟ ದೃಷ್ಟಿಕೋನದಲ್ಲಿ, ವೇದಗಳಲ್ಲಿರುವ ಶಬ್ದ ಮತ್ತು ಅರ್ಥಗಳ ವ್ಯುತ್ಪತ್ತಿ ಮತ್ತು ಸಂಬಂಧಪಟ್ಟವುಗಳು.

ಜ್ಯೋತಿಷಂ : ಭಾರತೀಯ ಜ್ಯೋತಿಷ್ಯ ಮತ್ತು ವೇದಾಂಗ ಜ್ಯೊತಿಷ್ಯ.

ಕಲ್ಪಃ : ವೇದಮಂತ್ರಗಳನ್ನು ವಿವಿಧ ಉದ್ದೇಶಗಳಲ್ಲಿ ಬಳಸುವುದರ ಬಗ್ಗೆ ಮತ್ತು ಸಂಬಂಧಿತ ಅನೇಕ ವಿಷಯಗಳ ಬಗ್ಗೆ ಹಲವಾರು ಕಲ್ಪ ಗ್ರಂಥಗಳಲ್ಲಿ ವಿವರಿಸಲಾಗಿದೆ.

ನಾಸ್ತಿಕ ದರ್ಶನಗಳು : ಸಾಮಾನ್ಯವಾಗಿ ನಾಸ್ತಿಕದರ್ಶನ ಎನ್ನುವುದರ ಅರ್ಥವು ತಪ್ಪಾಗಿ ತಿಳಿಯಲ್ಪಡುತ್ತದೆ. ಆ ಶಬ್ದದ ಅರ್ಥವನ್ನು ದೇವರ ಮೇಲೆ ಅವಿಶ್ವಾಸ ಎನ್ನುವುದಾಗಿ ತಪ್ಪು ತಿಳಿಯಲಾಗುತ್ತದೆ. ಅದರ ಅರ್ಥವು ವೇದಪ್ರಾಮಾಣ್ಯವನ್ನು ಒಪ್ಪದಿರುವುದು ಎನ್ನುವಷ್ಟಕ್ಕೆ ಸೀಮಿತವಾಗಿದೆ.

ಮೆಟಾಫಿಸಿಕ್ಸ್: ಭೌತಾತೀತ ಕಲ್ಪಿತ ಸಿದ್ಧಾಂತ/ಆಧುನಿಕ ವಿಜ್ಞಾನ ದರ್ಶನ. ಇದು ಪಾಶ್ಚಾತ್ಯ (ಭಾರತೀಯೇತರ) ದರ್ಶನ ಗಳಲ್ಲಿ ಇರವು ಮತ್ತು ಪ್ರಪಂಚಗಳ ಮೂಲಾಂಶಗಳನ್ನು ವಿಶ್ಲೇಷಿಸಲು ಯತ್ನಿಸುವ ಒಂದು ಪ್ರಧಾನ ವಿಭಾಗ. ಸಾಂಪ್ರದಾಯಿಕವಾಗಿ ಇದು ವಿಶಾಲಾರ್ಥದಲ್ಲಿ ಎರಡು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸುತ್ತದೆ. 1)ಏನಿದೆ?, 2)ಹೇಗಿದೆ? ಈ ತತ್ವ ಜ್ಞಾನಿಯು ಜನರು ಪ್ರಪಂಚವನ್ನರ್ಥೈಸುವ ಮೂಲಭೂತ ಕಲ್ಪನೆಗಳನ್ನು ಸ್ಪಷ್ಟಿಕರಿಸಲು ಯತ್ನಿಸುತ್ತಾನೆ. ಉದಾಃ- ಅಸ್ತಿತ್ವ, ವಸ್ತು ಮತ್ತು ಅವುಗಳ ಸ್ವಭಾವಗಳು, ಆಕಾಶ ಮತ್ತು ಸಮಯ, ಕಾರಣ ಮತ್ತು ಪರಿಣಾಮ, ಮತ್ತು ಸಾಧ್ಯತೆ.

ಜಡ ಚೌಕಟ್ಟು : ಇನ್ನೂ ಹೆಚ್ಚು

ಪರಿಮಾಣ ಭೌತಶಾಸ್ತ್ರಇನ್ನೂ ಹೆಚ್ಚು

ಶ್ರೋಡಿಂಜರ್ ಸಮೀಕರಣಇನ್ನೂ ಹೆಚ್ಚು

ಸಾಪೇಕ್ಷ ಸಿದ್ಧಾಂತಇನ್ನೂ ಹೆಚ್ಚು

ಹೈಸನ್ಬರ್ಗ್’ನ ಅನಿಶ್ಚಿತತಾ ನಿಯಮ : ಇನ್ನೂ ಹೆಚ್ಚು

ಕರ್ಮ: “ಕರ್ಮ” ಎಂದರೆ ಕೇವಲ “ಕೆಲಸ” ಎಂದಲ್ಲ; ಅದು ಮನೋಭಾವ, ನೈತಿಕತೆ ಮುಂತಾದವುಗಳನ್ನೊಳಗೊಂಡ “ಕೆಲಸ.”

“ನಾಗ”, ಇತರ “ಸಾತ್ವಿಕ”, “ರಾಜಸಿಕ” ಮತ್ತು “ತಾಮಸಿಕ” ಶಕ್ತಿಗಳೆಲ್ಲಾ : ಇವುಗಳೆಲ್ಲಾ ಭೂಮಿಯ ಸಹಜ ಶಕ್ತಿಗಳು. ಇವುಗಳನ್ನು ಭೌತಿಕವಾಗಿ ಗುರುತಿಸಲಾಗುವುದಿಲ್ಲ. ಇವುಗಳು ಪ್ರಾಣಮಯ ಕೋಶದಲ್ಲಿ ಬಹುವಾಗಿ ಪ್ರಭಾವ ಬೀರುತ್ತವೆ, ನಂತರ ಉಳಿದ ಕೋಶಗಳ ಮೇಲೆ.

ಪ್ರೇತ: ಸತ್ತ ವ್ಯಕ್ತಿಯ ನೆರಳು.

ರಕ್ಷಸ್ಸು: ಸತ್ತ ವ್ಯಕ್ತಿಯ ಉನ್ನತ ನೆರಳು.

ಪ್ರಶ್ನಮಾರ್ಗ : ಸಾಮಾನ್ಯ ವಿಧಾನಗಳಲ್ಲಿ ನಿರ್ಧರಿಸಲಾಗದ ಪ್ರಶ್ನೆಗಳಿಗೆ ಉತ್ತರ ಪಡೆಯುವ ತಿಳಿಯಲಿರುವ ಭಾರತೀಯ ಜ್ಯೋತಿಷ್ಯದ ವಿಶಿಷ್ಟವಾದ ವಿಧಾನ.

ಆಗಮಾಧಾರಿತ : ಇನ್ನೂ ಹೆಚ್ಚು

ಚತುರ್ವರ್ಣ : ಸಮಾಜದ ಎಲ್ಲರನ್ನೂ ಅವರವರ ಗುಣ(ಸತ್ವ,ರಜ,ತಮ) ಮತ್ತು ಕರ್ಮಗಳನ್ನಧರಿಸಿ 1.ಬ್ರಾಹ್ಮಣ, 2.ಕ್ಷತ್ರಿಯ, 3.ವೈಶ್ಯ, 4.ಶೂದ್ರ ಎಂದು ನಾಲ್ಕಾಗಿ ವಿಭಾಗಿಸಬಹುದು.

ಯೋನಿ(ಆಯಾದಿ) : ಆಯ್ದುಕೊಂಡ ಕಟ್ಟಡದ ಅಳತೆಯನ್ನು ಪಡೆದು ಶುಭಾಶುಭ ಮತ್ತು ಸೂಕ್ತತೆಯನ್ನುನಿರ್ಧರಿಸುವ ನಿರ್ಧರಿಸುವ ಆಗಮಾಧಾರಿತ ಲೆಕ್ಕಚಾರ.